ಶನಿವಾರ, ಫೆಬ್ರವರಿ 4, 2023
28 °C

ನನ್ನಿಂದ ಬಟ್ಟೆ ತೊಳೆಸಿದ್ದ ಸಲೀಂ: ವಾಸೀಂ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರಾಚಿ:ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ಸಲೀಂ ಮಲಿಕ್ ಅವರು ತನ್ನನ್ನು ಸೇವಕ ನಂತೆ ನಡೆಸಿಕೊಂಡಿದ್ದರು ಎಂದು ಪಾಕಿಸ್ತಾನದ ದಿಗ್ಗಜ ವೇಗಿ ವಾಸೀಂ ಅಕ್ರಂ ಆರೋಪಿಸಿದ್ದಾರೆ.ಈ ವಿಷಯವನ್ನು ವಾಸೀಂ ತಮ್ಮ ಜೀವನಚರಿತ್ರೆ ‘ಸುಲ್ತಾನ್ ಎ ಮೆಮೊಯರ್‘ನಲ್ಲಿ ಉಲ್ಲೇಖಿಸಿದ್ದಾರೆ.

‘ತಂಡದ ಅನುಭವಿ ಆಟಗಾರನಾಗಿದ್ದ ಸಲೀಂ ತನಗೆ ಮಸಾಜ್ ಮಾಡಲು ಒತ್ತಾಯಿಸಿದ್ದರು. ಅಲ್ಲದೆ ಬೂಟು ಮತ್ತು ಬಟ್ಟೆಗಳನ್ನು ತೊಳೆದುಕೊಡುವಂತೆ ಹೇಳುತ್ತಿದ್ದರು’ ಎಂದು 1984ರಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದ್ದ ವಾಸೀಂ ಬಹಿರಂಗಪಡಿಸಿದ್ದಾರೆ. ವಾಸೀಂ ಆರೋಪ‌ ಸಲೀಂ ಅಲ್ಲಗಳೆದಿದ್ದಾರೆ. ತಮ್ಮ ಪುಸ್ತಕದ ಪ್ರಚಾರ ಕ್ಕಾಗಿ ಅವರು ಈ ರೀತಿ ಬರೆದುಕೊಂಡಿದ್ದಾರೆ ಎಂದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು