ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರೀಕ್ಷೆಗೆ ಒಳಗಾದ ಕರನ್‌

Last Updated 3 ಜುಲೈ 2020, 10:52 IST
ಅಕ್ಷರ ಗಾತ್ರ

ಸೌತಾಂಪ್ಟನ್‌: ‘ಅನಾರೋಗ್ಯದಿಂದ ಬಳಲುತ್ತಿದ್ದ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರು ಕೋವಿಡ್‌ ತಪಾಸಣೆಗೆ ಒಳಗಾಗಿದ್ದಾರೆ’ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌‌ ಕ್ರಿಕೆಟ್‌ ಮಂಡಳಿ (ಇಸಿಬಿ) ಹೇಳಿದೆ. ಹೀಗಾಗಿ ಅವರು ಇಂಗ್ಲೆಂಡ್‌ ತಂಡದ ಆಟಗಾರರ ಮಧ್ಯೆಯೇ ನಡೆಯುವ ಇನ್ನುಳಿದ ಅಭ್ಯಾಸ ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ.

ಕರನ್‌ ಅವರು ಗುರುವಾರ ತಮ್ಮ ಪರೀಕ್ಷಾ ಮಾದರಿಯನ್ನು ನೀಡಿದ್ದಾರೆ. ಸದ್ಯ ಅವರು ತಾವು ತಂಗಿರುವ ಏಜಿಸ್‌ ಬೌಲ್‌ನ ಹೊಟೇಲ್‌ನಲ್ಲೇ ಪ್ರತ್ಯೇಕವಾಸದಲ್ಲಿದ್ದಾರೆ.

‘ಸ್ಯಾಮ್‌ ಕರನ್‌ ಅವರಲ್ಲಿ ಕಳೆದ ರಾತ್ರಿ ಅತಿಸಾರ ಕಾಣಿಸಿಕೊಂಡಿತ್ತು. ಮಧ್ಯಾಹ್ನ ಸ್ವಲ್ಪ ಚೇತರಿಕೆ ಕಂಡುಬಂದಿದ್ದು, ಏಜಿಸ್‌ ಬೌಲ್‌ನ ಹೊಟೇಲೊಂದರ ತಮ್ಮ ಕೋಣೆಯಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ. ತಂಡದ ವೈದ್ಯರು ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ಕರನ್‌ ಅವರು ಕೋವಿಡ್‌ ತಪಾಸಣೆ ಮಾಡಿಸಿಕೊಂಡಿದ್ದಾರೆ’ ಎಂದು ಇಸಿಬಿ ಗುರುವಾರ ತಿಳಿಸಿದೆ. ಆದರೆ ತಪಾಸಣೆಯ ಫಲಿತಾಂಶ ಯಾವಾಗ ಲಭ್ಯವಾಗಲಿದೆ ಎಂಬುದನ್ನು ಮಂಡಳಿ ಉಲ್ಲೇಖಿಸಿಲ್ಲ.

ಹೋದ ಅಭ್ಯಾಸ ಪಂದ್ಯದ ಮೊದಲ ದಿನದಾಟದಲ್ಲಿ ಕರನ್‌ ಔಟಾಗದೆ 15 ರನ್‌ ಗಳಿಸಿದ್ದರು.

ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ ಮೂರು ಟೆಸ್ಟ್‌ ಪಂದ್ಯಗಳ ಸರಣಿಯ ಭಾಗವಾಗಿ ಇಂಗ್ಲೆಂಡ್‌ ತಂಡ ಅಭ್ಯಾಸ ನಡೆಸುತ್ತಿದೆ. ಇದೇ 8ರಂದು ಮೊದಲ ಟೆಸ್ಟ್‌ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT