ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ಸೆಮಿಫೈನಲ್‌ಗೆ ಸೌರಾಷ್ಟ್ರ, ಸರ್ವಿಸಸ್

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ
Last Updated 22 ಡಿಸೆಂಬರ್ 2021, 13:04 IST
ಅಕ್ಷರ ಗಾತ್ರ

ಜೈಪುರ: ಸರ್ವಿಸಸ್ ಮತ್ತು ಸೌರಾಷ್ಟ್ರ ತಂಡಗಳು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದವು.

ಬುಧವಾರ ಕೆ.ಎಲ್.ಸೈನಿ ಮೈದಾನದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿಬಲಗೈ ಮಧ್ಯಮವೇಗಿ ದಿವೇಶ್ ಪಠಾಣಿಯಾ (19ಕ್ಕೆ3) ಬೌಲಿಂಗ್ ಬಲದಿಂದ ಸರ್ವಿಸಸ್ ತಂಡವು ಏಳು ವಿಕೆಟ್‌ಗಳಿಂದ ಕೇರಳ ವಿರುದ್ಧ ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕೇರಳ ತಂಡವು 40.4 ಓವರ್‌ಗಳಲ್ಲಿ 175 ರನ್‌ ಗಳಿಸಿತು.

ರೋಹನ್ ಕುನ್ನುಮ್ಮಾಳ (85) ಏಕಾಂಗಿ ಹೋರಾಟ ನಡೆಸಿದರು. ಆದರೆ, ದಿವೇಶ್ ಜೊತೆಗೂಡಿದ ಅಭಿಷೇಕ್ ತಿವಾರಿ ಮತ್ತು ಪುಳಕಿತ್ ನಾರಂಗ್ ತಲಾ ಎರಡು ವಿಕೆಟ್ ಗಳಿಸಿದರು. ಸಾಧಾರಣ ಗುರಿಯ ಬೆನ್ನಟ್ಟಿದ ಸರ್ವಿಸಸ್ ತಂಡವನ್ನು ರವಿ ಚೌಹಾಣ್ (95; 90ಎ, 13ಬೌಂಡರಿ 3ಸಿಕ್ಸರ್) ಮತ್ತು ರಜತ್ ಪಲಿವಾಲಾ (ಔಟಾಗದೆ 65; 86ಎ, 8ಬೌಂಡರಿ) ಗೆಲುವಿನ ದಡ ಮುಟ್ಟಿಸಿದರು. ಸರ್ವಿಸಸ್ 30.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 176 ರನ್ ಗಳಿಸಿತು.

ಸವಾಯ್ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಸೌರಾಷ್ಟ್ರ ತಂಡವೂ ಏಳು ವಿಕೆಟ್‌ಗಳಿಂದ ವಿದರ್ಭ ಎದುರು ಜಯಭೇರಿ ಬಾರಿಸಿತು.

ಜಯದೇವ್ ಉನದ್ಕತ್ (25ಕ್ಕೆ2) ನೇತೃತ್ವದ ಬೌಲಿಂಗ್ ಪಡೆಯ ನಿಖರ ದಾಳಿಯ ಮುಂದೆ ವಿದರ್ಭದ ಬಲಿಷ್ಠ ಬ್ಯಾಟಿಂಗ್ ಪಡೆ ಕುಸಿಯಿತು. ಇದರಿಂದಾಗಿ 40.3 ಓವರ್‌ಗಳಲ್ಲಿ 150 ರನ್ ಮಾತ್ರ ಗಳಿಸಿತು.

ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡವು ಪ್ರೇರಕ್ ಮಂಕಡ್ (ಔಟಾಗದೆ 77; 72ಎ, 10ಬೌಂಡರಿ, 2ಸಿಕ್ಸರ್) ಮತ್ತು ಅರ್ಪಿತ್ ವಸವದಾ (ಔಟಾಗದೆ 41; 66ಎ, 6ಬೌಂಡರಿ) ಅವರ ಅಬ್ಬರದ ಫಲದಿಂದ 29.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 151 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರುಗಳು:

ಕೆ.ಎಲ್. ಸೈನಿ ಮೈದಾನ:

ಕೇರಳ: 40.4 ಓವರ್‌ಗಳಲ್ಲಿ 175 (ಕುನ್ನುಮಾಳ 85, ವಿ. ಮನೋಹರನ್ 41, ದಿವೇಶ್ ಪಠಾಣಿಯಾ 19ಕ್ಕೆ3, ಅಭಿಷೇಕ್ ತಿವಾರಿ 33ಕ್ಕೆ2, ಪುಳಕಿತ್ ನಾರಂಗ್ 51ಕ್ಕೆ2)

ಸರ್ವಿಸಸ್: 30.5 ಓವರ್‌ಗಳಲ್ಲಿ 3ಕ್ಕೆ 1876 (ರವಿ ಚೌಹಾಣ್ 95, ರಜತ್ ಪಲಿವಾಲಾ ಔಟಾಗದೆ 65, ಉನ್ನಿಕೃಷ್ಣ ಮನುಕೃಷ್ಣನ್ 23ಕ್ಕೆ2) ಫಲಿತಾಂಶ: ಸರ್ವಿಸಸ್‌ಗೆ 7 ವಿಕೆಟ್‌ಗಳ ಜಯ.

ಸವಾಯ್ ಮಾನಸಿಂಗ್ ಕ್ರೀಡಾಂಗಣ:

ವಿದರ್ಭ: 40.3 ಓವರ್‌ಗಳಲ್ಲಿ 150 (ಫೈಜ್ ಫಜಲ್ 23, ಅಪೂರ್ವ್ ವಾಂಖೆಡೆ 72, ಜಯದೇವ್ ಉನದ್ಕತ್ 25ಕ್ಕೆ2, ಚಿರಾಗ್ ಜಾನಿ 34ಕ್ಕೆ2, ಧರ್ಮೇಂದ್ರಸಿಂಹ ಜಡೇಜ 34ಕ್ಕೆ2, ಯುವರಾಜ್ ಚೂಡಾಸಮಾ 15ಕ್ಕೆ2)

ಸೌರಾಷ್ಟ್ರ: 29.5 ಓವರ್‌ಗಳಲ್ಲಿ 3ಕ್ಕೆ 151 (ಪ್ರೇರಕ್ ಮಂಕಡ್ ಔಟಾಗದೆ 77, ಅರ್ಪಿತ್ ವಾಸವದಾ ಔಟಾಗದೆ 41, ಆದಿತ್ಯ ಠಾಕ್ರೆ 13ಕ್ಕೆ2) ಫಲಿತಾಂಶ: ಸೌರಾಷ್ಟ್ರ ತಂಡಕ್ಕೆ 7 ವಿಕೆಟ್‌ಗಳ ಜಯ.

*****

ಸೆಮಿಫೈನಲ್ ಪಂದ್ಯಗಳು (ಡಿಸೆಂಬರ್ 24)

ಹಿಮಾಚಲ ಪ್ರದೇಶ–ಸರ್ವಿಸಸ್ (ಸವಾಯ್ ಮಾನಸಿಂಗ್ ಕ್ರೀಡಾಂಗಣ)

ತಮಿಳುನಾಡು–ಸೌರಾಷ್ಟ್ರ (ಕೆ.ಎಲ್. ಸೈನಿ ಮೈದಾನ)

ಸಮಯ: ಬೆಳಿಗ್ಗೆ 9ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT