ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಂಗ್ ಆಫ್‌ ತಿದ್ದುಪಡಿಗೆ ಸುಪ್ರೀಂ ಹಸಿರುನಿಶಾನೆ: ಗಂಗೂಲಿ, ಜಯ್ ಶಾ ನಿರಾಳ

12 ವರ್ಷ ಪದಾಧಿಕಾರಿಯಾಗಲು ಅವಕಾಶ
Last Updated 14 ಸೆಪ್ಟೆಂಬರ್ 2022, 18:48 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿಯಮಾವಳಿಯ ತಿದ್ದುಪಡಿ ಮಾಡಲು ಸುಪ್ರೀಂ ಕೋರ್ಟ್ ಬುಧವಾರ ಅವಕಾಶ ನೀಡಿತು. ಇದರೊಂದಿಗೆ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರು ಅಧಿಕಾರದಲ್ಲಿ ಮುಂದುವರಿಯಲು ದಾರಿ ಸರಾಗವಾಗಿದೆ.

ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರ ನ್ಯಾಯಪೀಠವು ಬುಧವಾರ ತೀರ್ಪು ಪ್ರಕಟಿಸಿತು.

ಪದಾಧಿಕಾರಿಗಳು ಸತತ 12 ವರ್ಷ (ರಾಜ್ಯಸಂಸ್ಥೆಯಲ್ಲಿ ಆರು ವರ್ಷ ಹಾಗೂ ಬಿಸಿಸಿಐನಲ್ಲಿ ಆರು ವರ್ಷಗಳು) ಸತತವಾಗಿ ಅಧಿಕಾರ ನಿರ್ವಹಿಸಬಹುದು. ಈ ಮೊದಲಿನಂತೆ ಎರಡು ಅವಧಿಗಳ (ಒಂದು ಅವಧಿಗೆ ಮೂರುವರ್ಷ) ನಡುವೆ ಒಂದು ಅವಧಿ ಕೂಲಿಂಗ್ ಆಫ್‌ ನಿಯಮ ಕಡ್ಡಾಯವಲ್ಲ ಎಂದು ತೀರ್ಪು ನೀಡಲಾಗಿದೆ.

‘ಕೂಲಿಂಗ್ ಆಫ್ ನಿಯಮವು ಅಧಿಕಾರದ ಏಕಸ್ವಾಮ್ಯವನ್ನು ತಡೆಯಲು ಇದೆ’ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಒಬ್ಬ ಪದಾಧಿಕಾರಿಯು ಬಿಸಿಸಿಐ ಮತ್ತು ರಾಜ್ಯ ಅಸೋಸಿಯೇಷನ್ ಮಟ್ಟದಲ್ಲಿ ಸತತ ಎರಡು ಅವಧಿಗೆ ನಿರ್ದಿಷ್ಟ ಹುದ್ದೆಯಲ್ಲಿ ಸೇವೆ ಸಲ್ಲಿಸಬಹುದು. ನಂತರ ಅವರು ಮೂರು ವರ್ಷಗಳ ಕೂಲಿಂಗ್-ಆಫ್ ಅವಧಿಯನ್ನು ಪೂರೈಸಬೇಕಾಗುತ್ತದೆ ಎಂದೂ ಪೀಠ ಹೇಳಿದೆ.

ಗಂಗೂಲಿ ಹಾಗೂ ಶಾ ಅವರು ತಮ್ಮ ರಾಜ್ಯ ಹಾಗೂ ಬಿಸಿಸಿಐ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಒಟ್ಟು ಆರು ವರ್ಷ ಪೂರೈಸಿದ್ದರು. ಆದ್ದರಿಂದ ಅವರು ಕೂಲಿಂಗ್‌ ಆಫ್ ನಿಯಮಕ್ಕೆ ಒಳಪಡಬೇಕಿತ್ತು. ಇದನ್ನು ಪ್ರಶ್ನಿಸಿ ಹಾಗೂ ನಿಯಮವನ್ನು ತೆಗೆದುಹಾಕಬೇಕು ಎಂದು ಕೋರಿ ಇಬ್ಬರೂ 2020ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಈಗ ಹೊರಬಂದಿರುವ ತೀರ್ಪಿನಿಂದಾಗಿ ಅವರಿಬ್ಬರೂ 2025ರವರೆಗೆ ತಮ್ಮ ಹುದ್ದೆಗಳಲ್ಲಿ ಮುಂದುವರಿಯಲು ಅವಕಾಶ ಸಿಕ್ಕಂತಾಗಿದೆ.

2015ರಲ್ಲಿ ಬಿಸಿಸಿಐನಲ್ಲಿ ಆಡಳಿತ ಸುಧಾರಣೆಗೆ ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಕಮಿಟಿಯು ಶಿಫಾರಸುಗಳನ್ನು ನೀಡಿತ್ತು. ಅದರ ಅನ್ವಯ ರಚಿಸಲಾಗಿದ್ದ ನೂತನ ನಿಯಮಾವಳಿಯನ್ನು ಜಾರಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಗಂಗೂಲಿ ಹಾಗೂ ಜಯ್ ಶಾ ಅವರನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿತ್ತು. ಇದಕ್ಕೂ ಮುನ್ನ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆ ಹಾಗೂ ಜಯ್ ಶಾ ಗುಜರಾತ್ ಕ್ರಿಕೆಟ್ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ನಾಲ್ಕು ವರ್ಷಗಳಿಗೂ ಹೆಚ್ಚು ಅವಧಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT