ನವದೆಹಲಿ: ಬಾಂಗ್ಲಾದೇಶದ ಎದುರು ಏಕದಿನ ಕ್ರಿಕೆಟ್ ಸರಣಿಯನ್ನು ಸೋತಿರುವ ಭಾರತ ತಂಡವನ್ನು ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ.

‘ಭಾರತ ತಂಡವು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ದಶಕದಷ್ಟು ಹಳೆಯ ಶೈಲಿಯಲ್ಲಿಯೇ ಆಡುತ್ತಿದೆ. 2015ರಲ್ಲಿ ಇಂಗ್ಲೆಂಡ್ ತಂಡವು ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನಲ್ಲಿ ನಿರ್ಗಮಿಸಿತ್ತು. ಅದರ ನಂತರ ಹಲವಾರು ಕಠಿಣ ನಿರ್ಣಯಗಳನ್ನು ಕೈಗೊಂಡು ತಂಡವನ್ನು ಸುಧಾರಣೆ ಮಾಡಿತು. ಅಂತಹ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ತುರ್ತು ಈಗ ಭಾರತಕ್ಕಿದೆ’ ಎಂದು ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ‘ಐಪಿಎಲ್ ಶುರುವಾದ ನಂತರ ಭಾರತವು ಟಿ20 ವಿಶ್ವಕಪ್ ಗೆದ್ದಿಲ್ಲ. ಕಳೆದ ಐದು ವರ್ಷಗಳಲ್ಲಿ ಏಕದಿನ ಮಾದರಿಯಲ್ಲಿಯೂ ಉತ್ತಮವಾಗಿ ಆಡುತ್ತಿಲ್ಲ. ಕೆಲವು ದ್ವಿಪಕ್ಷೀಯ ಸರಣಿಗಳಲ್ಲಿ ಗೆಲುವು ಸಾಧಿಸಿದೆ. ತಪ್ಪುಗಳಿಂದ ಪಾಠ ಕಲಿಯುತ್ತಿಲ್ಲ. ಲೋಪಗಳು ಪುನರಾವರ್ತನೆಯಾಗುತ್ತಿವೆ. ಬದಲಾವಣೆ ಬೇಕಿದೆ’ ಎಂದಿದ್ದಾರೆ.

ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್, ‘ಕ್ರಿಪ್ಟೊ ಕರೆನ್ಸಿಗಿಂತಲೂ ವೇಗವಾಗಿ ಭಾರತ ಕ್ರಿಕೆಟ್ ತಂಡದ ಗುಣಮಟ್ಟ ಕುಸಿಯುತ್ತಿದೆ. ರೋಹಿತ್ ಶರ್ಮಾ ಮತ್ತು ಬಳಗವೇ ಎಚ್ಚೆತ್ತುಕೊಳ್ಳಿ’ ಎಂದು ಟ್ವೀಟ್‌ನಲ್ಲಿ ಕುಟುಕಿದ್ದಾರೆ.

ಭಾರತದ ಏಕದಿನ ಕ್ರಿಕೆಟ್ ತಂಡವು ಈಚೆಗೆ ನ್ಯೂಜಿಲೆಂಡ್‌ನಲ್ಲಿಯೂ 0–1ರಿಂದ ಸರಣಿ ಸೋತಿತ್ತು. ಇದೀಗ ಬಾಂಗ್ಲಾದಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಪರಾಭವಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.