ಬುಧವಾರ, ಜನವರಿ 22, 2020
25 °C

ವಿಕೆಟ್‌ ಕೀಪಿಂಗ್: ರಾಹುಲ್‌ಗೂ ‌ಆಯ್ಕೆ ಅವಕಾಶ -ರವಿಶಾಸ್ತ್ರಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿರಾಮದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನ ಒತ್ತಡಕ್ಕೆ ತಮ್ಮ ದೇಹ ಒಗ್ಗಿಕೊಳ್ಳುವುದೇ ಎಂಬುದು ಮಹೇಂದ್ರ ಸಿಂಗ್‌ ಧೋನಿ ಅವರಿಗಷ್ಟೇ ಗೊತ್ತಾಗಬಲ್ಲದು. ಮುಂದಿನ ವರ್ಷದ ಟಿ–20 ವಿಶ್ವಕಪ್‌ಗೆ ಕೆ.ಎಲ್‌.ರಾಹುಲ್‌ ಅವರೂ ಕೀಪಿಂಗ್‌ಗೆ ಗಂಭೀರ ಆಯ್ಕೆಯಾಗಬಲ್ಲರು– ಇದು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಅವರ ಅಭಿಪ್ರಾಯ.

ರಿಷಭ್‌ ಪಂತ್ ಸಂಯಮ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದೂ ಹೇಳುತ್ತಾರೆ ಶಾಸ್ತ್ರಿ. ಪಂತ್‌ ಇತ್ತೀಚಿನ ಪಂದ್ಯಗಳಲ್ಲಿ ಭರವಸೆಗೆ ತಕ್ಕಂತೆ ಆಡುತ್ತಿಲ್ಲ. ಧೋನಿ ಅವರ ಪುನರಾಗಮನದ ಬಗ್ಗೆಯೂ ಸ್ಪಷ್ಟತೆ ಇಲ್ಲದಿರುವ ಕಾರಣ ರಾಹುಲ್‌ಗೆ ‘ಮಲ್ಟಿ ಟಾಸ್ಕಿಂಗ್‌’ ಪಾತ್ರ ವಹಿಸುವ ಸಾಧ್ಯತೆಯನ್ನು ಶಾಸ್ತ್ರಿ ತಳ್ಳಿಹಾಕಿಲ್ಲ.

‘ಧೋನಿ ವಿಶ್ರಾಂತಿ ಯೋಚನೆ ಸೂಕ್ತವಾದುದು. ಐಪಿಎಲ್‌ ಹತ್ತಿರವಿರುವಾಗ ಅವರ ಈ ಆಯ್ಕೆ ಸರಿಯಿದೆ. ಏಕದಿನ ಪಂದ್ಯಗಳಿಗೆ ಪುನರಾಗಮನ ಮಾಡಲು ಅವರಿಗೆ ತೀವ್ರ ಆಸಕ್ತಿಯಿದ್ದಂತಿಲ್ಲ. ಟೆಸ್ಟ್‌ಗೆ ಅವರು ವಿದಾಯ ಹೇಳಿದ್ದಾರೆ. ಟಿ–20 ಆಯ್ಕೆ ಅವರಿಗೆ ಇದೆ. ಈ ಮಾದರಿ ಅವರಿಗೆ ಒಗ್ಗುತ್ತದೆ. ಆದರೆ ಅವರ ದೇಹ ಕೇಳುವುದೇ ಎಂಬುದನ್ನು ಅವರೇ  ಉತ್ತರಿಸಬೇಕಾ ಗುತ್ತದೆ’ ಎಂದು ‘ಇಂಡಿಯಾ ಟುಡೆ’ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ವಿಶ್ಲೇಷಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು