ಪತ್ನಿಯಿಂದ ಮಾನಸಿಕ ಹಿಂಸೆಗೆ ಒಳಗಾಗಿ ವಿಚ್ಛೇದನ ಪಡೆದಿದ್ದ ಭಾರತದ ಕ್ರಿಕೆಟ್ ಆಟಗಾರ ಶಿಖರ್ ಧವನ್ ಅವರು ತಮ್ಮ ಮಗನ ಹುಟ್ಟುಹಬ್ಬವಾದ ಇಂದು ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ. ‘ನಿನ್ನನ್ನು(ಮಗನನ್ನು) ನೋಡದ ಹಾಗೆ ಎಲ್ಲ ಕಡೆ ಬ್ಲಾಕ್ ಮಾಡಿದರು’ ಎಂದು ಬರೆದುಕೊಂಡಿದ್ದಾರೆ.

ಮಗನ ಹುಟ್ಟುಹಬ್ಬಕ್ಕೆ ಇನ್ಸ್ಟಾಗ್ರಾಂನಲ್ಲಿ ಶುಭಾಶಯ ತಿಳಿಸಿರುವ ಧವನ್, ನಿನ್ನನ್ನು ವೈಯಕ್ತಿಕವಾಗಿ ಭೇಟಿಯಾಗದೇ ಸುಮಾರು ಒಂದು ವರ್ಷವೇ ಕಳೆದಿದೆ ಎಂದಿದ್ದಾರೆ.

‘ನಿನ್ನನ್ನು ವೈಯಕ್ತಿಕವಾಗಿ ಭೇಟಿಯಾಗದೇ ಸುಮಾರು ಒಂದು ವರ್ಷವೇ ಕಳೆಯಿತು. ಕಳೆದ ಮೂರು ತಿಂಗಳಿನಿಂದ ನಿನ್ನನ್ನು ಮಾತನಾಡಿಸದ ಹಾಗೆ ಎಲ್ಲ ಕಡೆಯಲ್ಲೂ ಬ್ಲಾಕ್ ಮಾಡಿದರು. ಹುಟ್ಟುಹಬ್ಬವಾದ ಇಂದು ನಿನ್ನ ಹಳೆಯ ಫೋಟೊವನ್ನೇ ಪೋಸ್ಟ್ ಮಾಡುತ್ತಿದ್ದೇನೆ. ಹುಟ್ಟುಹಬ್ಬದ ಶುಭಾಶಯಗಳು’ ಎಂದು ತಿಳಿಸಿದ್ದಾರೆ.
.ಪತ್ನಿಯಿಂದ ಮಾನಸಿಕ ಹಿಂಸೆ: ವಿಚ್ಛೇದನ ನೀಡಿದ ಕ್ರಿಕೆಟಿಗ ಶಿಖರ್ ಧವನ್.
‘ನಿನ್ನನ್ನು ನೇರವಾಗಿ ಭೇಟಿ ಮಾಡಲಾಗದಿದ್ದರೂ ಮಾನಸಿಕವಾಗಿ ನಿನ್ನ ಜೊತೆ ನಾನು ಇದ್ದೇನೆ. ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದರು.

ಇತ್ತೀಚೆಗಷ್ಟೇ ಪತ್ನಿಯಿಂದ ವಿಚ್ಛೇದನ ಪಡೆದ ಧವನ್ ಅವರಿಗೆ ಮಗನನ್ನು ಕಾಯಂ ಕಸ್ಪಡಿಗೆ ತೆಗೆದುಕೊಳ್ಳಲು ನ್ಯಾಯಾಲಯ ಒಪ್ಪಿಗೆ ನೀಡಿರಲಿಲ್ಲ. ಆದರೆ ಭಾರತ ಮತ್ತು ಆಸ್ಟ್ರೇಲಿಯಾಗೆ ಹೋಗಿ ಭೇಟಿ ಮಾಡಲು ಮತ್ತು ವಿಡಿಯೊ ಕರೆ ಮೂಲಕ ಮಾತನಾಡಲು ಅವಕಾಶ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.