ಲಂಡನ್: ಇಂಗ್ಲೆಂಡ್ ತಂಡದಲ್ಲಿರುವ ಪಾಕ್ ಸಂಜಾತ ಸ್ಪಿನ್ನರ್ ಶೋಯೆಬ್ ಬಷೀರ್ ಅವರಿಗೆ ಕೊನೆಗೂ ಭಾರತಕ್ಕೆ ತೆರಳಲು ಬುಧವಾರ ವೀಸಾ ನೀಡಲಾಗಿದೆ. ಈ ಮೊದಲು ವೀಸಾ ಸಿಗದ ಕಾರಣ ಬೆನ್ ಸ್ಟೋಕ್ಸ್ ನೇತೃತ್ವದ ತಂಡದ ಜೊತೆ ಅವರಿಗೆ ಅಬುಧಾಬಿಯಿಂದ ಭಾರತಕ್ಕೆ ಪ್ರಯಾಣಿಸಲು ಆಗಿರಲಿಲ್ಲ.

‘ಶೋಯೆಬ್ ಬಷೀರ್ ಅವರಿಗೆ ಈಗ ವೀಸಾ ನೀಡಲಾಗಿದೆ. ಅವರು ವಾರಾಂತ್ಯದಲ್ಲಿ ಭಾರತದಲ್ಲಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕಗ್ಗಂಟು ಬಗೆಹರಿದಿರುವುದರಿಂದ ಸಂತಸವಾಗಿದೆ’ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಮಂಡಳಿ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದೆ.

20 ವರ್ಷದ ಬೌಲರ್‌ಗೆ ವೀಸಾ ಸಿಗದೇ ಸಮಸ್ಯೆ ಎದುರಿಸಿದ್ದರಿಂದ ಬೇಸರವಾಗಿತ್ತು ಎಂದು ಇದಕ್ಕೆ ಮೊದಲು ನಾಯಕ ಬೆನ್ ಸ್ಟೋಕ್ಸ್ ಹೇಳಿದ್ದರು. ‘ಅಬುದಾಬಿಯಲ್ಲಿ ಈ ವಿಷಯ ಗೊತ್ತಾದಾಗ, ಬಷೀರ್‌ಗೆ ವೀಸಾ ಸಿಗುವವರೆಗೆ ನಾವು ಅಲ್ಲಿಂದ ಹೊರಡಬಾರದು ಎಂದಿದ್ದೆ’ ಎಂದು ಟೆಸ್ಟ್ ಪಂದ್ಯಕ್ಕೆ ಮುನ್ನಾದಿನದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.