ಶುಕ್ರವಾರ, ಏಪ್ರಿಲ್ 16, 2021
31 °C
ದಿಕ್ಷಾಂಶು ನೇಗಿ, ಶಾರ್ದೂಲ್ ಠಾಕೂರ್ ಪ್ರಬಲ ದಾಳಿ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ಪ್ರೇರಕ್ ಮಂಕಡ್, ಶ್ರೇಯಸ್ ಅಯ್ಯರ್ ಶತಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಪ್ರೇರಕ್ ಮಂಕಡ್ ಗಳಿಸಿದ ಅಮೋಘ ಶತಕದ ನೆರವಿನಿಂದ ಸೌರಾಷ್ಟ್ರ ತಂಡ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಂಡೀಗಢವನ್ನು 62 ರನ್‌ಗಳಿಂದ ಮಣಿಸಿತು.

ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಪ್ರೇರಕ್ ಆರು ಸಿಕ್ಸರ್ ಮತ್ತು 16 ಬೌಂಡರಿಗಳೊಂದಿಗೆ 130 ಎಸೆತಗಳಲ್ಲಿ 174 ರನ್ ಕಲೆ ಹಾಕಿದರು. ಇದರಿಂದ 7ಕ್ಕೆ 388 ರನ್ ಗಳಿಸಿದ ಸೌರಾಷ್ಟ್ರ ಎದುರಾಳಿಗಳನ್ನು 326 ರನ್‌ಗಳಿಗೆ ನಿಯಂತ್ರಿಸಿತು.

ಶ್ರೇಯಸ್ ಅಯ್ಯರ್ ಶತಕ
ಜೈಪುರದಲ್ಲಿ ನಡೆದ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ (116; 103 ಎಸೆತ, 11 ಬೌಂಡರಿ, 3 ಸಿಕ್ಸರ್‌) ಅವರ ಅಮೋಘ ಶತಕ ಮತ್ತು ವೇಗಿ ಶಾರ್ದೂಲ್ ಠಾಕೂರ್‌ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಮುಂಬೈ ತಂಡ ರಾಜಸ್ಥಾನವನ್ನು 67 ರನ್‌ಗಳಿಂದ ಮಣಿಸಿತು. 

ಚೆನ್ನೈನಲ್ಲಿ ನಡೆದ ಪಂದ್ಯಲ್ಲಿ ಲೆಗ್ ಸ್ಪಿನ್ನರ್ ದಿಕ್ಷಾಂಶು ನೇಗಿ ಅವರ ದಾಳಿಗೆ ನಲುಗಿದ ಮಿಜೋರಾಂ ತಂಡ ಉತ್ತರಾಖಂಡಕ್ಕೆ ಎಂಟು ವಿಕೆಟ್‌ಗಳಿಂದ ಮಣಿಯಿತು.

ಸಂಕ್ಷಿಪ್ತ ಸ್ಕೋರು
ಸೌರಾಷ್ಟ್ರ
: 50 ಓವರ್‌ಗಳಲ್ಲಿ 7ಕ್ಕೆ 388 (ಪ್ರೇರಕ್ ಮಂಕಡ್ 174, ವಿಶ್ವರಾಜ್ ಜಡೇಜ 50; ಜಸ್‌ಕರಣ್ ಸಿಂಗ್ 60ಕ್ಕೆ4)
ಚಂಡೀಗಢ: 50 ಓವರ್‌ಗಳಲ್ಲಿ 7ಕ್ಕೆ 326 (ಅಂಕಿತ್ ಕೌಶಿಕ್ 54, ಮನನ್ ವೊಹ್ರಾ 50, ಗೌರವ್ ಗಂಭೀರ್ ಔಟಾಗದೆ 40)
ಫಲಿತಾಂಶ: ಸೌರಾಷ್ಟ್ರಕ್ಕೆ 62 ರನ್‌ಗಳ ಜಯ.

ಮುಂಬೈ: 50 ಓವರ್‌ಗಳಲ್ಲಿ 7ಕ್ಕೆ 317 (ಶ್ರೇಯಸ್ ಅಯ್ಯರ್ 116, ಯಶಸ್ವಿ ಜೈಸ್ವಾಲ್ 38; ಶುಭಂ ಶರ್ಮಾ 59ಕ್ಕೆ3, ಅಭಿಮನ್ಯು ಲಾಂಬ 66ಕ್ಕೆ2)
ರಾಜಸ್ಥಾನ: 42.2 ಓವರ್‌ಗಳಲ್ಲಿ 250 (ಮಹಿಪಾಲ್ ಲಮ್ರೊರ್‌ 76; ಶಾರ್ದೂಲ್ ಠಾಕೂರ್ 50ಕ್ಕೆ4, ಧವಳ್ ಕುಲಕರ್ಣಿ 26ಕ್ಕೆ3).
ಫಲಿತಾಂಶ: ಮುಂಬೈಗೆ 67 ರನ್‌ಗಳ ಜಯ. 

ಮಿಜೋರಾಂ: 38.3 ಓವರ್‌ಗಳಲ್ಲಿ 117 (ತರುವರ್ ಕೊಹ್ಲಿ 62, ಕೆ.ಬಿ.ಪವನ್ 28; ದಿಕ್ಷಾಂಶು ನೇಗಿ 21ಕ್ಕೆ6)
ಉತ್ತರಾಖಂಡ: 10.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 118 (ಕಮಲ್ ಸಿಂಗ್‌ ಔಟಾಗದೆ 40, ಕುನಾಲ್ ಚಂಡೇಲ 58)
ಫಲಿತಾಂಶ: ಉತ್ತರಾಖಂಡಕ್ಕೆ 8 ವಿಕೆಟ್‌ಗಳ ಗೆಲುವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು