ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೀಕ್ಷಕ ವಿವರಣೆಗೆ ಮರಳಲಿರುವ ಮಾಜಿ ಕ್ರಿಕೆಟ್‌ ಆಟಗಾರ ನವಜೋತ್‌ ಸಿಧು

Published 19 ಮಾರ್ಚ್ 2024, 18:29 IST
Last Updated 19 ಮಾರ್ಚ್ 2024, 18:29 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ಮಾಜಿ ಆಟಗಾರ ನವಜೋತ್‌ ಸಿಧು ಅವರು ದಶಕದ ನಂತರ ಮುಂಬರುವ ಐಪಿಎಲ್‌ನಲ್ಲಿ ವೀಕ್ಷಕ ವಿವರಣೆಗಾರರ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕ್ರಿಕೆಟ್‌ಗೆ ವಿದಾಯ ಹೇಳಿದ ಅಲ್ಪಾವಧಿಯಲ್ಲೇ ಸಿಧು ರಾಜಕೀಯ ರಂಗಕ್ಕೆ ಇಳಿದಿದ್ದರು. ಈಗ ಟಿವಿ ವಿವರಣೆಗಾರನ ಪಾತ್ರಕ್ಕೆ ಮರಳಿದ್ದಾರೆ.

ವೀಕ್ಷಕ ವಿವರಣೆ ವೇಳೆ ಅವರು ಬಳಸುತ್ತಿದ್ದ ಲವಲವಿಕೆಯ ಮಾತುಗಳು, ಸ್ವಾರಸ್ಯಕರ ನುಡಿಗಟ್ಟುಗಳ ಬಳಕೆಯಿಂದ ‘ಸಿಧುಯಿಸಂ’ ಪದ ಹುಟ್ಟಿಕೊಂಡಿತ್ತು.

ಈ ಲೀಗ್‌ನಿಂದ ಭಾರತ ಮಾತ್ರವಲ್ಲ, ಇತರ ಕೆಲವು ದೇಶಗಳೂ ಟಿ20 ವಿಶ್ವಕಪ್‌ಗೆ ತಮ್ಮ ತಂಡಗಳನ್ನು ನಿರ್ಧರಿಸಲು ಅನುಕೂಲವಾಗಲಿದೆ ಎಂದು ಸಿಧು ಹೇಳಿದ್ದಾರೆ.

‘ವಿಶ್ವದ ಕಣ್ಣು ಐಪಿಎಲ್‌ ಮೇಲಿದೆ. ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರಿಗೆ ಸದವಕಾಶ ಇದೆ. ವಿದೇಶಿ ಆಟಗಾರರೂ ತಮ್ಮ ದೇಶದ ತಂಡಗಳಲ್ಲಿ ಸ್ಥಾನ ಪಡೆಯಲೂ ಈ ಲೀಗ್ ವೇದಿಕೆ ಕಲ್ಪಿಸುತ್ತಿದೆ’ ಎಂದು ಸ್ಟಾರ್‌ ಸ್ಪೋರ್ಟ್ಸ್ ವಾಹಿನಿ ಮೂಲಕ ನಡೆದ ಸಂದರ್ಶನದಲ್ಲಿ ಸಿಧು ಸುದ್ದಿಸಂಸ್ಥೆಗೆ ತಿಳಿಸಿದರು.

‘ಹೊಸದಾಗಿ ವೀಕ್ಷಕ ವಿವರಣೆಗಾರನಾದಾಗ ಒಂದು ಇಡೀ ಟೂರ್ನಿಗೆ ನನಗೆ ₹60–70 ಲಕ್ಷ ಸಿಗುತಿತ್ತು. ಐಪಿಎಲ್‌ನಲ್ಲಿ ವೀಕ್ಷಕ ವಿವರಣೆಗಾರನಾದಾಗ ದಿನಕ್ಕೆ ₹25 ಲಕ್ಷ ಪಡೆಯುತ್ತಿದ್ದೆ. ಆದರೆ ಹಣದಿಂದಷ್ಟೇ ತೃಪ್ತಿ ಸಿಗುವುದಿಲ್ಲ. ಈ ಕೆಲಸ ಸುಂದರ ಅನುಭವ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT