ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 ವಿಶ್ವಕಪ್ ICC ತಂಡದಲ್ಲಿ ಭಾರತದ 6 ಆಟಗಾರರು: ವಿರಾಟ್‌ ಕೊಹ್ಲಿಗಿಲ್ಲ ಸ್ಥಾನ

Published 1 ಜುಲೈ 2024, 12:20 IST
Last Updated 1 ಜುಲೈ 2024, 12:20 IST
ಅಕ್ಷರ ಗಾತ್ರ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸೋಮವಾರ ಪ್ರಕಟಿಸಿರುವ ಟಿ20 ವಿಶ್ವಕಪ್ ಐಸಿಸಿ ತಂಡದಲ್ಲಿ ಭಾರತದ ಆರು ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಅವರನ್ನು ಕೈಬಿಡಲಾಗಿದೆ. 

ಈಚೆಗಷ್ಟೇ ಮುಕ್ತಾಯವಾದ ವಿಶ್ವಕಪ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಭಾರತ ತಂಡದ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ ಅವರೇ ಆಗಿದ್ದರು. ಆ ಪಂದ್ಯದಲ್ಲಿ ಅವರು ಗಳಿಸಿದ್ದ ಅರ್ಧಶತಕದಿಂದಾಗಿ ಭಾರತ ತಂಡವು ಸ್ಪರ್ಧಾತ್ಮಕ ಗುರಿಯೊಡ್ಡಲು ಸಾಧ್ಯವಾಗಿತ್ತು. ಈ ಟೂರ್ನಿಯುದ್ದಕ್ಕೂ ಅವರು ಆರಂಭಿಕ ಬ್ಯಾಟರ್ ಆಗಿ ಆಡಿದ್ದರು. ಗುಂಪು ಮತ್ತು ಸೂಪರ್ 8ರ ಪಂದ್ಯಗಳಲ್ಲಿ ಅವರು ಹೆಚ್ಚು ರನ್‌ ಗಳಿಸಿರಲಿಲ್ಲ. ಆದರೆ ಫೈನಲ್‌ನಲ್ಲಿ ಪಂದ್ಯಶ್ರೇಷ್ಠರಾಗಿದ್ದರು. 

ಭಾರತ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ, ವೇಗಿ ಜಸ್‌ಪ್ರೀತ್ ಬೂಮ್ರಾ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಅರ್ಷದೀಪ್ ಸಿಂಗ್ ಹಾಗೂ ಸ್ಪಿನ್, ಆಲ್‌ರೌಂಡರ್ ಅಕ್ಷರ್ ಪಟೇಲ್ ಸ್ಥಾನ ಗಳಿಸಿದ್ಧಾರೆ. ಅಫ್ಗಾನಿಸ್ತಾನ ತಂಡದ ಮೂವರು, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡದ ತಲಾ ಒಬ್ಬರಿಗೆ ಸ್ಥಾನ ಲಭಿಸಿದೆ. 

ತಂಡ

ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್ (ಎಲ್ಲರೂ ಭಾರತದವರು), ರೆಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಫಜಲ್‌ಹಕ್ ಫರೂಕಿ (ಅಫ್ಗಾನಿಸ್ತಾನ), ಮಾರ್ಕಸ್ ಸ್ಟೊಯಿನಿಸ್ (ಆಸ್ಟ್ರೇಲಿಯಾ), ನಿಕೊಲಸ್ ಪೂರನ್ (ವೆಸ್ಟ್ ಇಂಡೀಸ್), 12ನೇ ಆಟಗಾರ: ಎನ್ರಿಚ್ ನಾಕಿಯಾ (ದಕ್ಷಿಣ ಆಫ್ರಿಕಾ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT