ಕೊಲಂಬೊ: ಬಲಗೈ ಬ್ಯಾಟ್ಸ್‌ಮನ್ ಧನುಷ್ಕಾ ಗುಣತಿಲಕ ಅವರನ್ನುಶ್ರೀಲಂಕಾ ಕ್ರಿಕೆಟ್ ಮಂಡಳಿಯು ಆರು ಪಂದ್ಯಗಳಿಗೆ ನಿಷೇಧ ಹೇರಿದೆ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾ ಕ್ರಿಕೆಟ್ ಆಟಗಾರರು ಕೊಲಂಬೊದ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು.

ರಾತ್ರಿ ವೇಳೆ ಧನುಷ್ಕಾ ಹಾಗೂ ಅವರ ಆಪ್ತ ಸ್ನೇಹಿತ ಸಂದೀಪ್ ಜೂಡ್ ಸೆಲಿಯಾ ನಾರ್ವೆಯ ಇಬ್ಬರು ಮಹಿಳೆಯರನ್ನು ತಾವು ತಂಗಿದ್ದ ಕೋಣೆಗೆ ಕರೆಸಿಕೊಂಡಿದ್ದರು. ಅದರಲ್ಲಿನ ಒಬ್ಬ ಮಹಿಳೆಯು ಅತ್ಯಾಚಾರದ ಆರೋಪ ಹೊರಿಸಿದ್ದರು. ನಂತರ ಆ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದರು.

ವಿವಾದ ಭುಗಿಲೇಳುತ್ತಿದ್ದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು (ಎಸ್‌ಎಲ್‌ಸಿ) ಗುಣತಿಲಕ ಅವರನ್ನು ಅಮಾನತು ಮಾಡಿತ್ತು. ಅದರ ಬೆನ್ನಲ್ಲೇ, ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಆಡುವ ತಂಡದಿಂದ ಅವರನ್ನು ಕೈಬಿಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.