ಸೋಮವಾರ, ಮಾರ್ಚ್ 1, 2021
19 °C

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್: ಸಂಕಷ್ಟದಲ್ಲಿ ಪಾಕಿಸ್ತಾನ

ಎಪಿ Updated:

ಅಕ್ಷರ ಗಾತ್ರ : | |

ಕರಾಚಿ: ದಕ್ಷಿಣ ಆಫ್ರಿಕಾ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಖುಷಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನಕ್ಕೆ ವೇಗಿ ಕಗಿಸೋ ರಬಾಡ (8ಕ್ಕೆ 2) ಆಘಾತ ನೀಡಿದರು. ಇಲ್ಲಿ ಆರಂಭವಾದ ಉಭಯ ತಂಡಗಳ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡವು ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಕಳೆದುಕೊಂಡು 33 ರನ್‌ ಗಳಿಸಿದೆ.

ಪಂದ್ಯದ ಮೊದಲ ದಿನವಾದ ಮಂಗಳವಾರ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 220 ರನ್‌ ಗಳಿಸಿ ಸರ್ವಪತನವಾಯಿತು. ಡೀನ್ ಎಲ್ಗರ್‌ (58) ಅವರನ್ನು ಹೊರತುಪಡಿಸಿ ಯಾರಿಂದಲೂ ಉತ್ತಮ ಸಾಮರ್ಥ್ಯ ಹೊರಹೊಮ್ಮಲಿಲ್ಲ. ಪಾಕಿಸ್ತಾನದ ಲೆಗ್‌ಸ್ಪಿನ್ನರ್‌ ಯಾಸಿರ್ ಶಾ (54ಕ್ಕೆ 3) ಹಾಗೂ ಎಡಗೈ ಸ್ಪಿನ್ನರ್‌ (38ಕ್ಕೆ 2) ದಾಳಿಗೆ ಹರಿಣಪಡೆ ಕುಸಿಯಿತು.

ಭೋಜನ ವಿರಾಮದ ವೇಳೆಗೆ ಕೇವಲ 2 ವಿಕೆಟ್‌ ಕಳೆದುಕೊಂಡು 94 ರನ್ ಗಳಿಸಿದ್ದ ಪ್ರವಾಸಿ ತಂಡ ಬಳಿಕ 112 ರನ್ ಸೇರಿಸುವಷ್ಟರಲ್ಲಿ ಎಂಟು ವಿಕೆಟ್‌ ಕಳೆದುಕೊಂಡಿತು. ರಬಾಡ (ಔಟಾಗದೆ 21) ಬ್ಯಾಟಿಂಗ್‌ನಲ್ಲೂ ಕಾಣಿಕೆ ನೀಡಿದರು.

ಮೊದಲ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಇಮ್ರಾನ್ ಬಟ್‌ (9), ಅಬಿದ್ ಅಲಿ (4), ಬಾಬರ್ ಆಜಂ (7) ಹಾಗೂ ಶಾಹೀನ್ ಶಾ ಆಫ್ರಿದಿ ವಿಕೆಟ್‌ಗಳನ್ನು ಅಲ್ಪಮೊತ್ತಕ್ಕೆ ಕಳೆದುಕೊಂಡಿತು. ಅಜರ್ ಅಲಿ ಹಾಗೂ ಫವಾದ್ ಆಲಂ ಕ್ರೀಸ್‌ನಲ್ಲಿದ್ದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 69.2 ಓವರ್‌ಗಳಲ್ಲಿ 220 (ಡೀನ್ ಎಲ್ಗರ್‌ 58, ಜಾರ್ಜ್‌ ಲಿಂಡೆ 35, ಫಾಫ್‌ ಡುಪ್ಲೆಸಿ 23, ಕಗೀಸೊ ರಬಾಡ ಔಟಾಗದೆ 21; ಯಾಸಿರ್ ಶಾ 54ಕ್ಕೆ 3, ನೂಮಾನ್ ಅಲಿ 38ಕ್ಕೆ 2, ಶಾಹೀನ್ ಶಾ ಆಫ್ರಿದಿ 49ಕ್ಕೆ 2) ಪಾಕಿಸ್ತಾನ: 18 ಓವರ್‌ಗಳಲ್ಲಿ 4 ವಿಕೆಟ್‌ಗೆ 33 (ಇಮ್ರಾನ್‌ ಬಟ್‌ 9; ಕಗೀಸೊ ರಬಾಡ 8ಕ್ಕೆ 2, ಕೇಶವ ಮಹಾರಾಜ್‌ 0ಕ್ಕೆ1, ಆ್ಯನ್ರಿಚ್‌ ನಾರ್ಟಿಯೆ 20ಕ್ಕೆ1).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು