ಮಂಗಳವಾರ, ಮಾರ್ಚ್ 2, 2021
28 °C

ದಕ್ಷಿಣ ಆಫ್ರಿಕಾ ಕ್ರಿಕೆಟಿಗನಿಗೆ ಕೋವಿಡ್‌-19

ಪಿಟಿಐ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಪ್ರಥಮ ದರ್ಜೆ ಕ್ರಿಕೆಟಿಗ ಸೋಲೊ ನಕ್ವೇನಿ ಅವರು ಕೋವಿಡ್‌–19 ರೋಗದಿಂದ ಬಳಲುತ್ತಿದ್ದಾರೆ.

ಪ್ರಸ್ತುತ ಸ್ಕಾಟ್ಲೆಂಡ್‌ನ ಅಬರ್ಡೀನ್‌ ನಗರದಲ್ಲಿ ನೆಲೆಸಿರುವ 25 ವರ್ಷ ವಯಸ್ಸಿನ ಸೋಲೊ ಅವರು ಶುಕ್ರವಾರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

‘ಹೋದ ವರ್ಷ ಗುಯಿಲೆನ್‌ ಬ್ಯಾರ್‌ ಸಿಂಡ್ರೋಮ್‌ಗೆ ತುತ್ತಾಗಿದ್ದೆ. ಕಳೆದ 10 ತಿಂಗಳಿಂದಲೂ ಈ ರೋಗದ ವಿರುದ್ಧ ಹೋರಾಡುತ್ತಿದ್ದೇನೆ. ಇದರಿಂದ ಗುಣಮುಖವಾಗುವ ವೇಳೆಗೆ ಕ್ಷಯ ರೋಗ ಬಾಧಿಸಿತು. ಇದರಿಂದಾಗಿ ಯಕೃತ್ (ಲಿವರ್‌) ಹಾಗೂ ಮೂತ್ರಪಿಂಡಕ್ಕೆ ಹಾನಿಯಾಗಿತ್ತು. ಈಗ ಕೋವಿಡ್‌ ರೋಗ ವಕ್ಕರಿಸಿದೆ. ನನಗೆ ಮಾತ್ರ ಹೀಗೇಕಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ’ ಎಂದು ಸೋಲೊ ಅವರು ಟ್ವೀಟ್‌ ಮಾಡಿದ್ದಾರೆ.

ಸೋಲೊ ಅವರು 2012ರಲ್ಲಿ ದಕ್ಷಿಣ ಆಫ್ರಿಕಾ 19 ವರ್ಷದೊಳಗಿನವರ ತಂಡದ ಪರ ಆಡಿದ್ದರು. ಫ್ರಾಂಚೈಸ್‌ ಲೀಗ್‌ನಲ್ಲೂ ಕಣಕ್ಕಿಳಿದಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು