ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಟೆಸ್ಟ್: ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಜಯಭೇರಿ, ಇಂಗ್ಲೆಂಡ್‌ಗೆ ಮುಖಭಂಗ

Last Updated 19 ಆಗಸ್ಟ್ 2022, 17:18 IST
ಅಕ್ಷರ ಗಾತ್ರ

ಲಂಡನ್: ಸ್ಪಿನ್ನರ್ ಕೇಶವ್ ಮಹಾರಾಜ್ ಹಾಗೂ ಎನ್ರಿಚ್ ನಾಕಿಯಾ ಅವರ ಅಮೋಘ ಬೌಲಿಂಗ್‌ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿತು.

ಲಾರ್ಡ್ಸ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಇನಿಂಗ್ಸ್ ಹಾಗೂ 12 ರನ್‌ಗಳಿಂದ ಗೆದ್ದಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 161 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು 37.4 ಓವರ್‌ಗಳಲ್ಲಿ 149 ರನ್‌ಗಳಿಗೆ ಆಲೌಟ್ ಆಯಿತು.

ಬೆನ್ ಸ್ಟೋಕ್ಸ್‌ ನಾಯಕತ್ವ ವಹಿಸಿಕೊಂಡ ನಂತರ ಇಂಗ್ಲೆಂಡ್ ತಂಡವು ಕಳೆದ ನಾಲ್ಕು ಟೆಸ್ಟ್‌ಗಳಲ್ಲಿ ಜಯ ಸಾಧಿಸಿತ್ತು. ಇದೀಗ ಆ ದಾಖಲೆ ಮುರಿದುಬಿದ್ದಿದೆ.

ಮಳೆಯಿಂದಾಗಿ ಪಂದ್ಯದ ಬಹಳಷ್ಟು ಸಮಯವು ನಷ್ಟವಾಗಿತ್ತು. ಆದರೂ ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ತಂಡದ ಡ್ರಾ ಸಾಧಿಸುವ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಇಂಗ್ಲೆಂಡ್:
45 ಓವರ್‌ಗಳಲ್ಲಿ 165
ದಕ್ಷಿಣ ಆಫ್ರಿಕಾ: 89.1 ಓವರ್‌ಗಳಲ್ಲಿ 326

ಎರಡನೇ ಇನಿಂಗ್ಸ್: ಇಂಗ್ಲೆಂಡ್: 37.4 ಓವರ್‌ಗಳಲ್ಲಿ 149 (ಅಲೆಕ್ಸ್ ಲೀಸ್ 35, ಬೆನ್ ಸ್ಟೋಕ್ಸ್ 20, ಸ್ಟುವರ್ಟ್ ಬ್ರಾಡ್ 35, ಕಗಿಸೊ ರಬಾಡ 27ಕ್ಕೆ2, ಕೇಶವ್ ಮಹಾರಾಜ 35ಕ್ಕೆ2, ಎನ್ರಿಚ್ ನಾಕಿಯಾ 47ಕ್ಕೆ3, ಮಾರ್ಕೊ ಜಾನ್ಸೆನ್ 13ಕ್ಕೆ2)

ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ ಇನಿಂಗ್ಸ್, 12 ರನ್‌ ಜಯ. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT