ಶುಕ್ರವಾರ, ಮೇ 7, 2021
26 °C

ಹಾಕಿ ಆಟಗಾರ ಶ್ರೀಜೇಶ್‌ಗೆ ಕೋವಿಡ್ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು/ನವದೆಹಲಿ: ಭಾರತ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್ ಶ್ರೀಜೇಶ್ ಗುರುವಾರ ಕೋವಿಡ್ –19 ಲಸಿಕೆಯ ಮೊದಲ ಡೋಸ್ ಪಡೆದರು.

‘ನಾನು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದೆ‘ ಎಂದು ಶ್ರೀಜೇಶ್ ಟ್ವೀಟ್ ಮಾಡಿದ್ದಾರೆ.  ಅವರು ಕೋವಿಶೀಲ್ಡ್‌ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ ಹೋಗುವ ಸಿದ್ಧತೆಯಲ್ಲಿರುವ ಹಾಕಿ ತಂಡವು ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಅಭ್ಯಾಸ ನಡೆಸುತ್ತಿದೆ.

ತಂಡವು ಈಚೆಗಷ್ಟೇ ಯುರೋಪ್ ಮತ್ತು ಅರ್ಜೆಂಟೀನಾ ಪ್ರವಾಸಗಳಿಗೆ ತೆರಳಿತ್ತು. ಪ್ರೊ ಲೀಗ್ ಪಂದ್ಯಗಳಲ್ಲಿ ಆಡಿತ್ತು. ಹೋದ ಭಾನುವಾರ ಸಾಯ್‌ನಲ್ಲಿ ಆರಂಭವಾದ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ತಂಡವು ಮರಳಿತ್ತು.

ಇಲ್ಲಿಯೇ ಇರುವ ಭಾರತ ಮಹಿಳಾ ತಂಡದ ಏಳು ಆಟಗಾರ್ತಿಯರಿಗೆ ಈಚೆಗಷ್ಟೇ  ಕೋವಿಡ್ ಇರುವುದು ಖಚಿತವಾಗಿತ್ತು. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.  ತಂಡದ ನಾಯಕಿ ರಾಣಿ ರಾಂಪಾಲ್ ಕೂಡ ಅದರಲ್ಲಿದ್ದಾರೆ.

ಅವರೊಂದಿಗೆ ವಿಡಿಯೊ ವಿಶ್ಲೇಷಕ ಅಮೃತಪ್ರಕಾಶ್ ಮತ್ತು ಸೈಂಟಿಫಿಕ್ ಸಲಹೆಗಾರ ವೇಯ್ನ್ ಲೊಂಬಾರ್ಡ್‌ ಅವರಿಗೂ ಸೋಂಕು ತಗುಲಿರುವುದು ಖಚಿತವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು