ಶುಕ್ರವಾರ, ಮೇ 7, 2021
26 °C
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಜಯಭೇರಿ

ಕ್ರಿಕೆಟ್‌: ಶ್ರೀಲಂಕಾಕ್ಕೆ ಸರಣಿ ಜಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಪಲ್ಲೆಕೆಲೆ : ಪದಾರ್ಪಣೆ ಪ‍ಂದ್ಯದಲ್ಲೇ 11 ವಿಕೆಟ್ ಗಳಿಸಿದ ಪ್ರವೀಣ್ ಜಯವಿಕ್ರಮ ಶ್ರೀಲಂಕಾ ತಂಡದ ಜಯಕ್ಕೆ ಕಾರಣರಾದರು. ಬಾಂಗ್ಲಾದೇಶದ ಎದುರು ಇಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 209 ರನ್‌ಗಳಿಂದ ಆತಿಥೇಯ ತಂಡವು ಜಯಿಸಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯನ್ನು 1–0ಯಿಂದ ತನ್ನದಾಗಿಸಿಕೊಂಡಿತು.

ಎರಡನೇ ಟೆಸ್ಟ್ ಅಂತಿಮ ದಿನವಾದ ಸೋಮವಾರ ಶ್ರೀಲಂಕಾಕ್ಕೆ ಐದು ವಿಕೆಟ್‌ ಬೇಕಿತ್ತು. ಅದರಲ್ಲಿ ಮೂರು ವಿಕೆಟ್‌ಗಳು ಎಡಗೈ ಸ್ಪಿನ್ನರ್‌ ಜಯವಿಕ್ರಮ (178ಕ್ಕೆ 11) ಅವರ ಪಾಲಾದವು. ಮೊದಲ ಇನಿಂಗ್ಸ್‌ನಲ್ಲಿ ಆರು ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಜಯವಿಕ್ರಮ ತಮ್ಮದಾಗಿಸಿಕೊಂಡರು. ಪಂದ್ಯಶ್ರೇಷ್ಠ ಪ್ರಶಸ್ತಿ ಅವರಿಗೆ ಒಲಿಯಿತು.

ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ (ಒಟ್ಟು 478 ರನ್‌) ಸರಣಿ ಶ್ರೇಷ್ಠ ಆಟಗಾರ ಎನಿಸಿಕೊಂಡರು.

ಉಭಯ ತಂಡಗಳ ನಡುವಣ ಮೊದಲ ಪಂದ್ಯ ಡ್ರಾ ಆಗಿತ್ತು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಶ್ರೀಲಂಕಾ: 159.2 ಓವರ್‌ಗಳಲ್ಲಿ 7ಕ್ಕೆ 493 ಡಿಕ್ಲೇರ್ಡ್: ಬಾಂಗ್ಲಾದೇಶ: 83 ಓವರ್‌ಗಳಲ್ಲಿ 251: ಎರಡನೇ ಇನಿಂಗ್ಸ್:ಶ್ರೀಲಂಕಾ: 42.2 ಓವರ್‌ಗಳಲ್ಲಿ 9ಕ್ಕೆ 194 ಡಿ.: ಬಾಂಗ್ಲಾದೇಶ: 71 ಓವರ್‌ಗಳಲ್ಲಿ 227 (ಮುಶ್ಫೀಕುರ್ ರಹೀಂ 40, ಮೆಹಿದಿ ಹಸನ್‌ 39, ಸೈಫ್ ಹಸನ್‌ 34, ಮೋಮಿನುಲ್ ಹಕ್‌ 32; ಪ್ರವೀಣ್ ಜಯವಿಕ್ರಮ 86ಕ್ಕೆ 5, ರಮೇಶ್ ಮೆಂಡಿಸ್ 103ಕ್ಕೆ 4). ಫಲಿತಾಂಶ: ಶ್ರೀಲಂಕಾ ತಂಡಕ್ಕೆ 209 ರನ್‌ಗಳ ಜಯ, 1–0ಯಿಂದ ಸರಣಿ ಗೆಲುವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು