ಪಲ್ಲೆಕೆಲೆ: ಪದಾರ್ಪಣೆ ಪಂದ್ಯದಲ್ಲಿ ಆರು ವಿಕೆಟ್ ಗಳಿಸಿದ ಎಡಗೈ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಶ್ರೀಲಂಕಾ ತಂಡದ ಭಾರೀ ಮುನ್ನಡೆಗೆ ಕಾರಣರಾದರು. ಅವರ ಪರಿಣಾಮಕಾರಿ ಬೌಲಿಂಗ್ನಿಂದ, ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಮೊದಲ ಇನಿಂಗ್ಸ್ನಲ್ಲಿ 251ಕ್ಕೆ ಎಲ್ಲ ವಿಕೆಟ್ ಕಳೆದುಕೊಂಡಿತು.

ಪಂದ್ಯದ ಮೂರನೇ ದಿನವಾದ ಶನಿವಾರ ಆಟ ನಿಂತಾದ ಶ್ರೀಲಂಕಾ ಎರಡನೇ ಇನಿಂಗ್ಸ್ನಲ್ಲಿ ಎರಡು ವಿಕೆಟ್ ಕಳೆದುಕೊಂಡು 17 ರನ್ ಗಳಿಸಿತ್ತು. ಮೊದಲ ಇನಿಂಗ್ಸ್ನ 242 ಸೇರಿ ಆತಿಥೇಯ ತಂಡ ಒಟ್ಟು 259 ರನ್ಗಳ ಮುನ್ನಡೆ ಗಳಿಸಿತ್ತು.

ಜಯವಿಕ್ರಮ (92ಕ್ಕೆ 6) ಅವರು, ತಮಿಮ್ ಇಕ್ಬಾಲ್, ಸೈಫ್ ಹಸನ್, ಮುಶ್ಫಿಕುರ್ ರಹೀಂ, ಲಿಟನ್ ದಾಸ್, ಮೆಹಿದಿ ಹಸನ್ ಹಾಗೂ ತಸ್ಕಿನ್ ಅಹಮದ್ ವಿಕೆಟ್ಗಳನ್ನು ಬುಟ್ಟಿಗೆ ಹಾಕಿಕೊಂಡರು.

ಅವರಿಗೆ ಆಫ್ಸ್ಪಿನ್ನರ್ ರಮೇಶ್ ಮೆಂಡಿಸ್ (2 ವಿಕೆಟ್) ಬೆಂಬಲ ನೀಡಿದರು.

ಮೊದಲ ಇನಿಂಗ್ಸ್ನಲ್ಲಿ ಶ್ರೀಲಂಕಾ 493 ರನ್ಗೆ ಏಳು ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಶ್ರೀಲಂಕಾ: 159.2 ಓವರ್ಗಳಲ್ಲಿ 7 ವಿಕೆಟ್ಗೆ 493 ಡಿಕ್ಲೇರ್ಡ್; ಬಾಂಗ್ಲಾದೇಶ: 83 ಓವರ್ಗಳಲ್ಲಿ 251 (ತಮಿಮ್ ಇಕ್ಬಾಲ್ 92, ಮೋಮಿನುಲ್ ಹಕ್ 49, ಮುಶ್ಫಿಕುರ್ ರಹೀಂ 40, ಸೈಫ್ ಹಸನ್ 25; ಪ್ರವೀಣ್ ಜಯವಿಕ್ರಮ 92ಕ್ಕೆ 6, ರಮೇಶ್ ಮೆಂಡಿಸ್ 86ಕ್ಕೆ2, ಸುರಂಗ ಲಕ್ಮಲ್ 30ಕ್ಕೆ 2). ಎರಡನೇ ಇನಿಂಗ್ಸ್: ಶ್ರೀಲಂಕಾ: 7 ಓವರ್ಗಳಲ್ಲಿ ಎರಡು ವಿಕೆಟ್ಗೆ 17 (ದಿಮುತ್ ಕರುಣಾರತ್ನೆ ಬ್ಯಾಟಿಂಗ್ 13; ತೈಜುಲ್ ಇಸ್ಲಾಂ 2ಕ್ಕೆ 1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.