ಶುಕ್ರವಾರ, ಸೆಪ್ಟೆಂಬರ್ 25, 2020
22 °C

ಸ್ಟೀವ್ ವ್ಹಾ ವ್ಯವಸ್ಥಾಪಕರಿಂದ ಅಂಗವಿಕಲ ಕ್ರಿಕೆಟಿಗರಿಗೆ ಆರ್ಥಿಕ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ವ್ಹಾ ಅವರ ವ್ಯವಸ್ಥಾಪಕ ಹಾರ್ಲಿ ಮೆಡ್‌ಕಾಫ್ ಅವರು ಭಾರತದ ಸುಮಾರು 100 ಅಂಗವಿಕಲ ಕ್ರಿಕೆಟಿಗರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಕೋವಿಡ್–19ರಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಆಟಗಾರರು ನೆರವಿಗೆ ಅರ್ಹರಾಗಿದ್ದಾರೆ ಎಂದು ಭಾರತ ಅಂಗವಿಕಲ ಕ್ರಿಕೆಟಿಗರ ಸಂಸ್ಥೆ (ಪಿಸಿಸಿಎಐ) ಗುರುವಾರ ತಿಳಿಸಿದೆ.

ಪ್ರತಿ ಆಟಗಾರನಿಗೆ ₹ ಐದು ಸಾವಿರ ಮೊತ್ತ ಲಭಿಸಲಿದೆ ಎಂದು ಪಿಸಿಸಿಎಐ ಕಾರ್ಯದರ್ಶಿ ರವಿ ಚೌಹಾಣ್ ತಿಳಿಸಿದ್ದು ಭವಿಷ್ಯದಲ್ಲಿ 400 ಮಂದಿ ಆಟಗಾರರಿಗೆ ನೆರವಿನ ಹಸ್ತ ಚಾಚುವ ಉದ್ದೇಶವಿದೆ ಎಂದು ವಿವರಿಸಿದ್ದಾರೆ.

’ಮೆಡ್‌ಕಾಫ್ ಮತ್ತು ಚುಕ್ಕಾ ಅವರು ಹಣ ಸಂಗ್ರಹ ಮಾಡಿದ್ದು ಇದಕ್ಕೆ ಸ್ಫೂರ್ತಿಯಾದ ಸ್ಟೀವ್ ವ್ಹಾ ಅವರಿಗೆ ಕೃತಜ್ಞತೆ ಸಲ್ಲಲೇಬೇಕು’ ಎಂದು ಹೇಳಿದ ಅವರು ‘ನೆರವಿಗೆ ಆಟಗಾರರನ್ನು ಹೇಗೆ ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಗೆ ‘ಸಂಬಂಧಪಟ್ಟ ರಾಜ್ಯ ಸಂಸ್ಥೆಗಳು ಆಯ್ಕೆ ಮಾಡಲಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು