ಸೋಮವಾರ, ಜನವರಿ 27, 2020
25 °C

ಟೆಸ್ಟ್‌: ವೇಗಿ ಜೋಫ್ರಾ ಆರ್ಚರ್‌ಗೆ ಗಾಯ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಣ ಎರಡನೇ ಕ್ರಿಕೆಟ್‌ ಟೆಸ್ಟ್ ಪಂದ್ಯ ಶುಕ್ರವಾರ ನ್ಯೂಲ್ಯಾಂಡ್ಸ್‌ನಲ್ಲಿ ಆರಂಭವಾಗಲಿದೆ. ಇಂಗ್ಲೆಂಡ್‌ ತಂಡದ ವೇಗದ ಬೌಲರ್‌ ಜೊಫ್ರಾ ಆರ್ಚರ್ ಮೊಣಗಂಟಿನ ನೋವಿನಿಂದ ಬಳಲುತ್ತಿದ್ದು, ಆಡುವುದು ಖಚಿತವಾಗಿಲ್ಲ.

ಅವರ ಸ್ಕ್ಯಾನ್‌ ವರದಿ ಬಂದ ನಂತರ ಆಡುವ ಬಗ್ಗೆ ಖಚಿತವಾಗಲಿದೆ ಎಂದು ಇಂಗ್ಲೆಂಡ್‌ ತಂಡದ ಕ್ಯಾಪ್ಟನ್‌ ಜೋ ರೂಟ್‌ ಗುರುವಾರ ತಿಳಿಸಿದರು. ಬುಧವಾರ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಮೊಣಕೈ ನೋವು ಕಾಣಿಸಿಕೊಂಡಿತ್ತು. ಜ್ವರದ ಕಾರಣ ರೋರಿ ಬರ್ನ್ಸ್‌ ಕೂಡ ಆಡುವುದು ಅನುಮಾನ.

ಪ್ರಿಟೋರಿಯಾದಲ್ಲಿ ಕಳೆದ ಭಾನುವಾರ ಮುಕ್ತಾಯಗೊಂಡ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 107 ರನ್‌ಗಳಿಂದ ಸೋತಿದ್ದು, ನಾಲ್ಕು ಪಂದ್ಯಗಳ ಸರಣಿಯಲ್ಲಿ 0–1 ಹಿನ್ನಡೆಯಲ್ಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು