ಶುಕ್ರವಾರ, ಜೂಲೈ 10, 2020
22 °C

ಮೊಬೈಲ್ ನೆಟ್‌ವರ್ಕ್‌ಗಾಗಿ ಮರ ಹತ್ತಿದ ಅಂಪೈರ್!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಅನಿಲ್ ಚೌಧರಿ ಅವರು ಮೊಬೈಲ್ ನೆಟ್‌ವರ್ಕ್‌ಗಾಗಿ ಏನು ಮಾಡಿದರು ಗೊತ್ತೆ?

ಕೊರೊನಾ ವೈರಸ್‌ ಹಾವಳಿಯಿಂದಾಗಿ ಇಡೀ ದೇಶ ದಿಗ್ಬಂಧನದಲ್ಲಿದೆ. ಇದರಿಂದಾಗಿ ತಮ್ಮ ಗ್ರಾಮಕ್ಕೆ ತೆರಳಿರುವ ಅನಿಲ್ ಅವರಿಗೆ ಮೊಬೈಲ್ ಸಂಪರ್ಕ ಪಡೆಯುವುದೇ ದೊಡ್ಡ ಸಾಹಸವಾಗಿದೆ. ಅದಕ್ಕಾಗಿ ಅವರು ನೆಟ್‌ವರ್ಕ್‌ಗಾಗಿ ಎತ್ತರದ ಮರವೊಂದನ್ನು ಏರಿ ಕುಳಿತ ಘಟನೆ ನಡೆದಿದೆ.

‘ಮಾರ್ಚ್‌ 16ರಿಂದ ನನ್ನ ಮಕ್ಕಳೊಂದಿಗೆ ಇದೇ ಗ್ರಾಮದಲ್ಲಿದ್ದೇನೆ. ಇದು ನಮ್ಮ ಪೂರ್ವಜರ ಊರು. ಬಹಳ ವರ್ಷಗಳಿಂದ ಬಂದಿರಲಿಲ್ಲ. ಒಂದು ವಾರ ಇರಲು ಯೋಚಿಸಿ ಬಂದಿದ್ದೆ. ಆದರೆ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಇಲ್ಲಿಯೇ ಉಳಿಯಬೇಕಾಯಿತು. ನನ್ನ ತಾಯಿ ಮತ್ತು ಪತ್ನಿ ಇಬ್ಬರೂ ದೆಹಲಿಯಲ್ಲಿದ್ದಾರೆ’ ಎಂದು ಅನಿಲ್ ತಿಳಿಸಿದ್ದಾರೆ.

 20 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು, 27 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅನಿಲ್ ಕಾರ್ಯನಿರ್ವಹಿಸಿದ್ದಾರೆ. 55 ವರ್ಷದ ಅನಿಲ್ ಅವರು ಸದ್ಯ ತಮ್ಮ ತವರು ಗ್ರಾಮ ಡಂಗ್ರೋಲ್ (ಉತ್ತರಪ್ರದೇಶ ರಾಜ್ಯ)ಗೆ ಇಬ್ಬರು ಪುತ್ರರೊಂದಿಗೆ ತೆರಳಿದ್ದಾರೆ.

‘ಇಲ್ಲಿ ಮೊಬೈಲ್ ನೆಟ್‌ವರ್ಕ್ ಸಂಪರ್ಕ ಸಿಗುವುದು ಕಷ್ಟ. ಇಂಟರ್‌ನೆಟ್‌ ಬಳಸಲು ಸಾಧ್ಯವಾಗುತ್ತಿಲ್ಲ. ಬೇರೆಯವರೊಂದಿಗೆ ಮಾತನಾಡಲೂ ಅಡಚಣೆಯಾಗುತ್ತಿದೆ. ಹಳ್ಳಿಯಿಂದ ಹೊರಗೆ ಹೋಗಬೇಕು, ಮರ ಏರಿ ಕುಳಿತುಕೊಳ್ಳಬೇಕು ಅಥವಾ ದೊಡ್ಡ ಕಟ್ಟಡಗಳ ಚಾವಣಿಗೆ ಹೋಗಬೇಕು. ಅಲ್ಲಿಯೂ ಕೂಡ ಎಲ್ಲ ಸಂದರ್ಭದಲ್ಲಿ ಸಂಪರ್ಕ ಸಿಗುವುದಿಲ್ಲ’ ಎಂದು ಅನಿಲ್ ಬೇಸರ ವ್ಯಕ್ತಪಡಿಸಿದ್ದಾರೆ. ‌

ತಮ್ಮ ಕೆಲವು ಚಿತ್ರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಾಕಿಕೊಂಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು