ಗುರುವಾರ , ಸೆಪ್ಟೆಂಬರ್ 24, 2020
24 °C
ಇಂಗ್ಲೆಂಡ್ ಬಳಗದಲ್ಲಿ ಅರಳಿದ ಜಯದ ಕನಸು

ಟೆಸ್ಟ್ ಕ್ರಿಕೆಟ್ | ಬ್ರಾಡ್ ಬಿರುಗಾಳಿ: ವಿಂಡೀಸ್ ದೂಳೀಪಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮ್ಯಾಂಚೆಸ್ಟರ್ (ಎಎಫ್‌ಪಿ): ವೇಗಿ ಸ್ಟುವರ್ಟ್ ಬ್ರಾಡ್ ಭಾನುವಾರವೂ ವೆಸ್ಟ್ ಇಂಡೀಸ್ ಪಾಲಿಗೆ ಸಿಂಹಸ್ವಪ್ನವಾದರು.

ಅದರಿಂದಾಗಿ ವೆಸ್ಟ್ ಇಂಡೀಸ್ ತಂಡವು  ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಕ್ರಿಕೆಟ್ ಪಂದ್ಯದ ಮೂರನೇ ದಿನ ಮೊದಲ ಇನಿಂಗ್ಸ್‌ನಲ್ಲಿ 172 ರನ್‌ಗಳ ಹಿನ್ನಡೆ ಅನುಭವಿಸಿತು. ಶನಿವಾರ ಬೆಳಿಗ್ಗೆ ಮಿಂಚಿನ ಅರ್ಧಶತಕ ಹೊಡೆದಿದ್ದ ಬ್ರಾಡ್ ಇಂಗ್ಲೆಂಡ್ ತಂಡವು 369 ರನ್‌ಗಳ ಸವಾಲಿನ ಮೊತ್ತ ಪೇರಿಸಲು ಕಾರಣರಾಗಿದ್ದರು. ಬೌಲಿಂಗ್‌ನಲ್ಲಿ ಅಬ್ಬರಿಸಿದ ಬ್ರಾಡ್ ಅರ್ಧ ಡಜನ್ ವಿಕೆಟ್ ಕಿತ್ತು ವಿಂಡೀಸ್ ತಂಡವು 197 ರನ್‌ಗಳಿಗೆ ಕುಸಿಯಲು ಕಾರಣರಾದರು.

ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ರೋರಿ ಬರ್ನ್ಸ್ ಮತ್ತು ಡಾಮ್ನಿಕ್ ಸಿಬ್ಲಿ ಉತ್ತಮ ಆರಂಭ ನೀಡಿದರು. ಇಬ್ಬರೂ ಅರ್ಧಶತಕ ಗಳಿಸಿದರು. ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿ ಇವೆ. ಆದ್ದರಿಂದ ಫಲಿತಾಂಶ ಹೊರಹೊಮ್ಮುವ ಸಾಧ್ಯತೆಗಳು ಹೆಚ್ಚಾಗಿವೆ. ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದು ಸಮಸ್ಥಿತಿಯಲ್ಲಿವೆ. ಈ ಪಂದ್ಯ ಜಯಿಸುವ ತಂಡಕ್ಕೆ ಸರಣಿ ಕಿರೀಟ ಒಲಿಯಲಿದೆ.

ಮೊದಲ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಅವರನ್ನು ಕೈಬಿಡಲಾಗಿತ್ತು. ಆಗ ಅವರು ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಎರಡನೇ ಪಂದ್ಯದಲ್ಲಿ ವೇಗಿ ಜೋಫ್ರಾ ಆರ್ಚರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆಗ ಸ್ಥಾನ ಪಡೆದಿದ್ದ ಬ್ರಾಡ್ ಬೌಲಿಂಗ್‌ನಲ್ಲಿ ಮಿಂಚಿದ್ದರು. ಅದರಿಂದಾಗಿ ಮೂರನೇ ಪಂದ್ಯದಲ್ಲಿ ತಂಡಕ್ಕೆ ಆರ್ಚರ್ ಮರಳಿದರೂ ಬ್ರಾಡ್ ಅವರನ್ನು ಉಳಿಸಲಾಗಿತ್ತು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್ : 111.5 ಓವರ್‌ಗಳಲ್ಲಿ 360 ಮತ್ತು ವೆಸ್ಟ್ ಇಂಡೀಸ್: 65 ಓವರ್‌ಗಳಲ್ಲಿ 197 (ಬ್ಲ್ಯಾಕ್‌ವುಡ್ 26, ಜೇಸನ್ ಹೋಲ್ಡರ್ 46, ಡೋರಿಚ್  37, ಜೇಮ್ಸ್ ಆ್ಯಂಡರ್ಸನ್ 28ಕ್ಕೆ2, ಸ್ಟುವರ್ಟ್ ಬ್ರಾಡ್ 31ಕ್ಕೆ6), ಎರಡನೇ ಇನಿಂಗ್ಸ್: 40.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 114 (ರೋರಿ ಬರ್ನ್ಸ್ ಬ್ಯಾಟಿಂಗ್ 50, ಡಾಮ್ನಿಕ್ ಸಿಬ್ಲಿ ಬ್ಯಾಟಿಂಗ್ 56) ವಿವರ ಅಪೂರ್ಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು