ಟೆಸ್ಟ್ನಲ್ಲಿ ಕನಿಷ್ಠ ಮೊತ್ತ: ಅಂದು ಲಾರ್ಡ್ಸ್, ಇಂದು ಅಡಿಲೇಡ್

ಅಡಿಲೇಡ್: ನಲ್ವತ್ತಾರು ವರ್ಷಗಳ ಹಿಂದೆ ಲಾರ್ಡ್ಸ್ನಲ್ಲಿ ಅಜಿತ್ ವಾಡೇಕರ್ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ಎದುರು ಲಾರ್ಡ್ಸ್ನಲ್ಲಿ ಗಳಿಸಿದ್ದ 42 ರನ್ಗಳು ಇದುವರೆಗಿನ ಕನಿಷ್ಠ ಮೊತ್ತವಾಗಿತ್ತು. ಘಟಾನುಘಟಿ ಬ್ಯಾಟ್ಸ್ಮನ್ಗಳಿದ್ದ ತಂಡ ಅದಾಗಿತ್ತು.
ಆ ಪಂದ್ಯದಲ್ಲಿಯೂ ಎರಡನೇ ಇನಿಂಗ್ಸ್ನಲ್ಲಿ ಭಾರತ ತಂಡವು ಕುಸಿದಿತ್ತು. ಇಂಗ್ಲೆಂಡ್ ತಂಡದ ವೇಗಿ ಕ್ರಿಸ್ ಓಲ್ಡ್ ಮತ್ತು ಜೆಫ್ ಅರ್ನಾಲ್ಡ್ ಕ್ರಮವಾಗಿ ಐದು ಮತ್ತು ನಾಲ್ಕು ವಿಕೆಟ್ಗಳನ್ನು ಕಬಳಿಸಿದ್ದರು. ಆ ಇನಿಂಗ್ಸ್ನಲ್ಲಿ ಸ್ಪಿನ್ನರ್ ಬಿ.ಎಸ್. ಚಂದ್ರಶೇಖರ್ ಅವರು ಕೊನೆಯ ಬ್ಯಾಟ್ಸ್ಮನ್ ಆಗಿದ್ದರು. ಆದರೆ ಅವರು ಗಾಯಗೊಂಡು ನಿವೃತ್ತರಾಗಿದ್ದರು.
ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ 629 ರನ್ ಗಳಿಸಿತ್ತು. ಡೆನಿಸ್ ಅಮಿಸ್, ಮೈಕ್ ಡೆನಿಸ್ ಮತ್ತು ಟೋನಿ ಗ್ರೇಗ್ ಅವರು ಶತಕ ಬಾರಿಸಿದ್ದರು. ಭಾರತದ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಆರು ವಿಕೆಟ್ಗಳನ್ನೂ ಕಬಳಿಸಿದ್ದರು. ಭಾರತ ಮೊದಲ ಇನಿಂಗ್ಸ್ನಲ್ಲಿ 302 ರನ್ ಗಳಿಸಿ ಆಲೌಟ್ ಆಗಿತ್ತು. ಸುನಿಲ್ ಗಾವಸ್ಕರ್ 49, ಫಾರೂಕ್ ಇಂಜಿನಿಯರ್ 86, ಜಿ.ಆರ್. ವಿಶ್ವನಾಥ್ 52 ಮತ್ತು ಏಕನಾಥ್ ಸೋಳ್ಕರ್ 43 ರನ್ ಗಳಿಸಿದ್ದರು. ಆದರೆ ಇಂಗ್ಲೆಂಡ್ ತಂಡವು ಭಾರತದ ಮೇಲೆ ಫಾಲೋ ಆನ್ ಹೇರಿತು. ಎರಡನೇ ಇನಿಂಗ್ಸ್ನಲ್ಲಿ ಸೋಳ್ಕರ್ (18ರನ್) ಬಿಟ್ಟರೆ ಉಳಿದ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ.
ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆ 42 ರನ್ಗಳೇ ಇಲ್ಲಿಯವರೆಗೂ ಅತ್ಯಂತ ಕಡಿಮೆ ಮೊತ್ತವಾಗಿತ್ತು. ಇದೀಗ ಎರಡನೇ ಸ್ಥಾನಕ್ಕೆ ಇಳಿಯಿತು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.