ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಂಟಿ ಕ್ಲಬ್‌ ಎದುರು ನಿಶ್ಚಲ್ ಶತಕ

Published 15 ಮಾರ್ಚ್ 2024, 0:14 IST
Last Updated 15 ಮಾರ್ಚ್ 2024, 0:14 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಟರ್ ಡಿ. ನಿಶ್ಚಲ್ (107, 156ಎಸೆತ, 4X19) ಅವರು ಚೆಂದದ ಶತಕ ಗಳಿಸಿದರು. ಆದರೂ ಸಸ್ಸೆಕ್ಸ್ ಕ್ಲಬ್ ವಿರುದ್ಧ ಕೆಎಸ್‌ಸಿಎ ಇಲೆವನ್ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಯಿತು. 

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕೌಂಟಿ ಕ್ರಿಕೆಟ್‌ ಕ್ಲಬ್ ಸಸ್ಸೆಕ್ಸ್ ಎದುರು ಗುರುವಾರ ಆರಂಭದ ಪಂದ್ಯದಲ್ಲಿ ಕರ್ನಾಟಕ ತಂಡವು 49.1 ಓವರ್‌ಗಳಲ್ಲಿ 201 ರನ್‌ಗಳಣ್ನು ಗಳಿಸಿತು. ಪ್ರವಾಸಿ ತಂಡದ ವೇಗಿ ಡ್ಯಾನಿ ಲ್ಯಾಂಬ್ (25ಕ್ಕೆ4) ಅವರು ಪರಿಣಾಮಕಾರಿ ದಾಳಿ ನಡೆಸಿದರು 

ಇದಕ್ಕೆ ಪ್ರತಿಕ್ರಿಯೆಯಾಗಿ ಇನಿಂಗ್ಸ್ ಆರಂಭಿಸಿರುವ ಪ್ರವಾಸಿ ಬಳಗವು ದಿನದಾಟದ ಮುಕ್ತಾಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 185 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕೆಎಸ್‌ಸಿಎ ಇಲೆವನ್: 49.1 ಓವರ್‌ಗಳಲ್ಲಿ 201 (ಡಿ. ನಿಶ್ಚಲ್ 107, ಡ್ಯಾನಿ ಲ್ಯಾಂಬ್ 25ಕ್ಕೆ4, ಹೆನ್ರಿ ಕ್ರೊಕಾಂಬ್ 23ಕ್ಕೆ2, ಜ್ಯಾಕ್ ಕಾರ್ಸನ್ 49ಕ್ಕೆ2, ಆರ್ಕಿ ಲೆನ್ಹಾಮ್ 37ಕ್ಕೆ2) ಸಸ್ಸೆಕ್ಸ್ : 2 ವಿಕೆಟ್‌ಗಳಿಗೆ 185 (ಟಾಮ್ ಕ್ಲಾರ್ಕ್ 41, ಟಾಮ್ ಅಲ್ಸೂಪ್ ಬ್ಯಾಟಿಂಗ್ 51, ಜೇಮ್ಸ್ ಕೊಲ್ಸ್ ಬ್ಯಾಟಿಂಗ್ 66)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT