ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ದೈಹಿಕ ಭಾಷೆಯು ಧೈರ್ಯದಿಂದ ಕೂಡಿರಲಿಲ್ಲ: ವಿರಾಟ್ ಕೊಹ್ಲಿ

Last Updated 1 ನವೆಂಬರ್ 2021, 10:20 IST
ಅಕ್ಷರ ಗಾತ್ರ

ದುಬೈ: ಭಾರತ ಪಂದ್ಯ ಸೋತಾಗೆಲ್ಲ ಪ್ರಾಮಾಣಿಕ ಉತ್ತರವನ್ನು ನೀಡುವ ನಾಯಕ ವಿರಾಟ್ ಕೊಹ್ಲಿ, ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಎದುರಾದ ಹೀನಾಯ ಸೋಲಿನ ಬಳಿಕವೂ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ.

'ಬ್ಯಾಟಿಂಗ್ಅಥವಾ ಬೌಲಿಂಗ್‌ನಲ್ಲಿನಾವು ಧೈರ್ಯಶಾಲಿ ಆಗಿರಲಿಲ್ಲ. ನಮ್ಮ ದೈಹಿಕ ಭಾಷೆಯು ಧೈರ್ಯದಿಂದ ಕೂಡಿರಲಿಲ್ಲ' ಎಂದು ಹೇಳಿದ್ದಾರೆ.

ಪಾಕಿಸ್ತಾನ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ಧ ಭಾರತ ಎಂಟು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ. ಇದರೊಂದಿಗೆ ಸೆಮಿಫೈನಲ್ ಪ್ರವೇಶ ಕಠಿಣವೆನಿಸಿದೆ.

'ನಾವು ಮೈದಾನಕ್ಕಿಳಿದಾಗ ಪಂದ್ಯ ಗೆಲ್ಲಲು ಬೇಕಾಗಿರುವಷ್ಟು ರನ್ ಕೂಡ ಇರಲಿಲ್ಲ. ಭಾರತಕ್ಕಾಗಿ ಆಡುವಾಗ ಸಾಕಷ್ಟು ನಿರೀಕ್ಷೆಗಳು ಇರುತ್ತದೆ. ಕೇವಲ ಅಭಿಮಾನಿಗಳಿಂದ ಮಾತ್ರವಲ್ಲದೆ ಆಟಗಾರರಿಂದಲೂ ಇರುತ್ತದೆ. ಹಾಗಾಗಿ ನಮ್ಮ ಆಟದಲ್ಲಿ ಯಾವಾಗಲೂ ಒತ್ತಡವಿರುತ್ತದೆ. ಆದರೆ ವರ್ಷಗಳಿಂದ ಒತ್ತಡವನ್ನು ನಿಭಾಯಿಸುವುದನ್ನು ಕರಗತ ಮಾಡಿಕೊಂಡಿದ್ದೇವೆ. ದೇಶಕ್ಕಾಗಿ ಆಡುವ ಪ್ರತಿಯೊಬ್ಬನೂ ಇದಕ್ಕೆ ಒಗ್ಗಿಕೊಂಡಿರಬೇಕು. ಅವೆಲ್ಲವನ್ನು ಒಂದು ತಂಡವಾಗಿ ಎದುರಿಸಿದಾಗ ಮೀರಿ ನಿಲ್ಲಲು ಸಾಧ್ಯವಾಗುತ್ತದೆ. ಆದರೆ ಕಳೆದೆರಡು ಪಂದ್ಯಗಳಲ್ಲಿ ಅದನ್ನು ಮಾಡಲು ನಮ್ಮಿಂದ ಸಾಧ್ಯವಾಗಲಿಲ್ಲ' ಎಂದು ಹೇಳಿದ್ದಾರೆ.

ಇವೆಲ್ಲದರ ಹೊರತಾಗಿಯೂ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶ ಸಾಧ್ಯತೆಯ ಬಗ್ಗೆ ಕೊಹ್ಲಿ ಆಶಾವಾದ ವ್ಯಕ್ತಪಡಿಸಿದ್ದಾರೆ. 'ಟ್ವೆಂಟಿ-20 ಕ್ರಿಕೆಟ್ ಆಡುವ ರೀತಿ ಇದೊಂದೇ ಆಗಿದೆ. ನೀವು ಆಶಾವಾದಿಯಾಗಿರಬೇಕು ಹಾಗೂ ಧನಾತ್ಮಕವಾಗಿರಬೇಕು' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT