ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC: ಭಾರತ, ಆಸ್ಟ್ರೇಲಿಯಾ ಪಂದ್ಯದ ಪ್ರಮುಖ ಹೈಲೈಟ್ಸ್‌...

Published 25 ಜೂನ್ 2024, 2:40 IST
Last Updated 25 ಜೂನ್ 2024, 2:40 IST
ಅಕ್ಷರ ಗಾತ್ರ

ಗ್ರಾಸ್‌ ಐಲೆಟ್‌, ಸೇಂಟ್‌ ಲೂಸಿಯಾ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿದ ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಇಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಭಾರತ ತಂಡ ಮಣಿಸಿತು. ಈ ಪಂದ್ಯದ ಪ್ರಮುಖ ಹೈಲೈಟ್ಸ್‌ ಇಲ್ಲಿದೆ...

  • ಈ ಪಂದ್ಯದಲ್ಲಿ ರೋಹಿತ್ ಕೇವಲ 41 ಎಸೆತಗಳಲ್ಲಿ ಏಳು ಬೌಂಡರಿ, ಎಂಟು ಸೊಗಸಾದ ಸಿಕ್ಸರ್‌ಗಳಿದ್ದ 92 ರನ್‌ ಸಿಡಿಸಿದರು.

  • ರೋಹಿತ್‌ ಹೊಡೆದ ರನ್‌ಗಳಲ್ಲಿ ಮೊತ್ತದಲ್ಲಿ ಏಳು ಬೌಂಡರಿ, ಎಂಟು ಸೊಗಸಾದ ಸಿಕ್ಸರ್‌ಗಳಿದ್ದವು.

  • ಈ ಪಂದ್ಯದಲ್ಲಿ  ಕೊಹ್ಲಿ ಬರಿಗೈಯಲ್ಲಿ ಮರಳಿದರು.

  • ಪಂದ್ಯದಲ್ಲಿ ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ 31, ಶಿವಂ ದುಬೆ 28, ಹಾರ್ದಿಕ್ ಪಾಂಡ್ಯ 27 ರನ್‌ಗಳ ಕಾಣಿಕೆ ನೀಡಿದರು.

  • ಆಸ್ಟ್ರೇಲಿಯಾ ಪರ ಜೋಶ್‌ ಹ್ಯಾಜಲ್‌ವುಡ್‌ ಪರಿಣಾಮಕಾರಿಯಾಗಿ ಬೌಲ್‌ ಮಾಡಿದರು. 4 ಓವರ್‌ಗಳಲ್ಲಿ 14 ರನ್‌ ನೀಡಿ 1 ವಿಕೆಟ್‌ ಪಡೆದರು.

  • ಮಿಚೆಲ್‌ ಸ್ಟಾರ್ಕ್, ಮಾರ್ಕಸ್‌ ಸ್ಟೊಯಿನಿಸ್ ತಲಾ ಎರಡು ವಿಕೆಟ್‌ ಪಡೆದರು.

  • ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್‌ ನೆರವಾದರು ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. 

  • ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ 76, ಮಿಚೆಲ್ ಮಾರ್ಷ್‌ 37 ರನ್‌ ಹೊಡೆದು ಗಮನ ಸೆಳೆದರು.

  • ಭಾರತದ ಬೌಲಿಂಗ್‌ ಪಡೆಯಲ್ಲಿ ಜಸ್‌ಪ್ರೀತ್ ಬೂಮ್ರಾ, ಆರ್ಷದೀಪ್ ಸಿಂಗ್, ಕುಲದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಅವರ ಆಟಕ್ಕೆ ಭಾರತ ಜಯ ದಾಖಲಿಸಿತು.

  • ಆರ್ಷದೀಪ್ ಸಿಂಗ್ 3, ಕುಲದೀಪ್ ಯಾದವ್ 2, ಜಸ್‌ಪ್ರೀತ್ ಬೂಮ್ರಾ, ಅಕ್ಷರ್ ಪಟೇಲ್ ತಲಾ 2 ವಿಕೆಟ್‌ ಕಬಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT