ಟಿ20 ವಿಶ್ವಕಪ್: ಭಾರತದ ವಿರುದ್ಧ ಟಾಸ್ ಗೆದ್ದ ಅಫ್ಗನ್, ಬೌಲಿಂಗ್ ಆಯ್ಕೆ

ಅಬುಧಾಬಿ: ಟಿ–20 ವಿಶ್ವಕಪ್‌ನಲ್ಲಿ ಬುಧವಾರ ನಡೆಯುತ್ತಿರುವ ಭಾರತ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಫ್ಗಾನಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದ ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಭಾರತ ತಂಡ ಉಳಿದಿರುವ ಮೂರು ಪಂದ್ಯಗಳಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಜಯಿಸುವ ಒತ್ತಡದಲ್ಲಿದೆ. ಈ ಪಂದ್ಯದಲ್ಲಿ ಆರ್. ಅಶ್ವಿನ್ ಸ್ಥಾನ ಪಡೆದಿದ್ದಾರೆ.
ಅಫ್ಗನ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಸ್ಕಾಟ್ಲೆಂಡ್ ಮತ್ತು ನಮಿಬಿಯಾ ವಿರುದ್ಧ ಗೆದ್ದಿರುವ ಮೊಹಮ್ಮದ್ ನಬಿ ಬಳಗವು, ಪಾಕ್ ಎದುರು ಸೋತಿದ್ದರೂ ದಿಟ್ಟ ಆಟವಾಡಿತ್ತು. ರಶೀದ್ ಖಾನ್ ಅವರಂತಹ ಅನುಭವಿ ಸ್ಪಿನ್ನರ್ ಇರುವ ಬೌಲಿಂಗ್ ಪಡೆಯು ಬ್ಯಾಟ್ಸ್‌ಮನ್‌ಗಳಿಗೆ ಒತ್ತಡಕ್ಕೆ ತಳ್ಳುವ ಸಾಮರ್ಥ್ಯ ಹೊಂದಿದೆ.
ಅಫ್ಗನ್ ತಂಡಕ್ಕೆ ಇನ್ನೆರಡು ಪಂದ್ಯಗಳು ಉಳಿದಿವೆ. ತಂಡವು ಭಾರತದ ಎದುರು ಸೋತು, ನ್ಯೂಜಿಲೆಂಡ್ ಎದುರು ಗೆದ್ದರೆ ವಿರಾಟ್ ಬಳಗಕ್ಕೆ ಸೆಮಿಫೈನಲ್ ಅವಕಾಶ ಸಿಗುವ ಸಾಧ್ಯತೆ ಇದೆ. ಅಲ್ಲಿಯೂ ಭಾರತವು ಉತ್ತಮವಾದ ನೆಟ್ ರನ್‌ರೇಟ್ ಹೊಂದಿರಬೇಕು.
🚨 Toss Update 🚨
Afghanistan have elected to bowl against #TeamIndia. #INDvAFG #T20WorldCup
Follow the match ▶️ https://t.co/42045c5J05 pic.twitter.com/mFTytfXh8z
— BCCI (@BCCI) November 3, 2021
ತಂಡಗಳು:
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಆರ್. ಅಶ್ವಿನ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ
ಅಫ್ಗಾನಿಸ್ತಾನ: ಮೊಹಮ್ಮದ್ ನಬಿ (ನಾಯಕ), ಹಜರತ್ ಉಲ್ಲಾ ಝಝೈ, ರೆಹಮಾನುಲ್ಲಾ ಗುರ್ಬಾಜ್, ನಜೀಬುಲ್ಲಾ ಜದ್ರಾನ್, ಫರೀದ್ ಅಹಮದ್, ಕರೀಂ ಜನತ್,, ಗುಲ್ಬದೀನ್ ನೈಬ್, ನವೀನ್ ಉಲ್ ಹಕ್, ರಶೀದ್ ಖಾಮ್, ಹಮೀದ್ ಹಸನ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.