ಮೆಲ್ಬರ್ನ್ : ಅಕ್ಟೋಬರ್ನಲ್ಲಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಮುಂದೂಡಿದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಅವಕಾಶ ಸಿಗುತ್ತದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮಾರ್ಕ್ ಟೇಲರ್ ಹೇಳಿದ್ದಾರೆ.

’ಟೂರ್ನಿಯನ್ನು ಮುಂದೂಡುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿವೆ. ಅಕ್ಟೋಬರ್–ನವೆಂಬರ್ನಲ್ಲಿ 15 ತಂಡಗಳು ಒಟ್ಟು ಏಳು ತಾಣಗಳಲ್ಲಿ ಆಡಲಿವೆ. 45 ಪಂದ್ಯಗಳು ನಡೆಯಬೇಕು. ಆದರೆ ಈಗಿರುವ ಪರಿಸ್ಥಿತಿಯಲ್ಲಿ ತಂಡಗಳು ಪ್ರಯಾಣ ಮಾಡುವುದು ಕಷ್ಟಕರವಾಗಿದೆ‘ ಎಂದು ಚಾನೆಲ್ ನೈನ್ ಸ್ಪೋರ್ಟ್ಸ್ಗೆ ಅವರು ಹೇಳಿಕೆ ನೀಡಿದ್ದಾರೆ.

’ಟೂರ್ನಿಗೂ ಮುನ್ನ 14 ದಿನಗಳ ಪ್ರತ್ಯೇಕವಾಸವು ತೀರಾ ಕ್ಲಿಷ್ಟಕರವಾಗುತ್ತದೆ. ಇದರಿಂದಾಗಿ ಐಸಿಸಿಯು ಟೂರ್ನಿಯನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡರೆ, ಬಿಸಿಸಿಐಗೆ ಐಪಿಎಲ್ ನಡೆಸಲು ಅವಕಾಶದ ಬಾಗಿಲು ತೆರೆದುಕೊಳ್ಳುತ್ತದೆ. ಆಗ ಆ ಟೂರ್ನಿಯಲ್ಲಿ ಆಡಲು ತೆರಳುವ ನಿರ್ಣಯವನ್ನು ವಿದೇಶಿ ಆಟಗಾರರು ವೈಯಕ್ತಿಕವಾಗಿ ತೆಗೆದುಕೊಳ್ಳಬಹುದು‘ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.