ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ವಿರುದ್ಧ ಶೋಚನೀಯ ಆಟ: ಪಾಕ್ ಮಾಜಿ ವೇಗಿ ವಾಸಿಂ ಅಕ್ರಮ್ ಕಿಡಿ

ಅಮೆರಿಕದ ಉತ್ತಮ ಪ್ರದರ್ಶನಕ್ಕೆ ಶ್ಲಾಘನೆ
Published 7 ಜೂನ್ 2024, 12:35 IST
Last Updated 7 ಜೂನ್ 2024, 12:35 IST
ಅಕ್ಷರ ಗಾತ್ರ

ಡಲ್ಲಾಸ್‌: ಅಮೆರಿಕ ವಿರುದ್ಧ ಗುರುವಾರ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಶೋಚನೀಯ ಆಟವಾಡಿದ ಪಾಕಿಸ್ತಾನ ತಂಡವನ್ನು ಮಾಜಿ ವೇಗಿ ವಾಸಿಂ ಅಕ್ರಮ್ ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಬರ್‌ ಅಜಂ ಬಳಗಕ್ಕೆ ನಾಕೌಟ್‌ ಹಾದಿ ಕಠಿಣವಾಗಲಿದೆ ಎಂದೂ ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಅಮೆರಿಕ ತಂಡಗಳು ನಿಗದಿತ 20 ಓವರುಗಳಲ್ಲಿ ತಲಾ 159 ರನ್‌ ಗಳಿಸಿದ್ದವು. ಸೂಪರ್‌ ಓವರ್‌ನಲ್ಲಿ ಗಳಿಸಿದ 18 ರನ್‌ಗಳನ್ನು ಅಮೆರಿಕ ಯಶಸ್ವಿಯಾಗಿ ರಕ್ಷಿಸಿಕೊಂಡಿತ್ತು.

‘ಪಾಕಿಸ್ತಾನದ್ದು ನಿರಾಶಾದಾಯಕ ಪ್ರದರ್ಶನ. ಸೋಲು– ಗೆಲುವು ಆಟದ ಭಾಗ. ಆದರೆ ಕೊನೆಯ ಎಸೆತದವರೆಗೆ ಹೋರಾಟ ನೀಡಬೇಕಿತ್ತು. ಪಾಕಿಸ್ತಾನ ಕ್ರಿಕೆಟ್‌ಗೆ ಇದು ಕೆಟ್ಟ ದಿನ’ ಎಂದು ಸ್ಟಾರ್‌ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಪಾಕ್ ತಂಡದ ಹಾದಿ ಇನ್ನು ಮುಂದೆ ಕಠಿಣವಾಗಲಿದೆ. ಆ ತಂಡವು ಭಾರತ ವಿರುದ್ಧ (ಜೂ. 9) ಆಡಬೇಕಾಗಿದೆ. ನಂತರ ಇನ್ನೆರಡು ಉತ್ತಮ ತಂಡಗಳ (ಐರ್ಲೆಂಡ್‌, ಕೆನಡ) ಜೊತೆಯೂ ಸೆಣಸಬೇಕಿದೆ ಎಂದರು.

‘ಅಮೆರಿಕವು, ಪಾಕಿಸ್ತಾನದ ವಿಕೆಟ್‌ಗಳನ್ನು ಆರಂಭದಲ್ಲೇ ಗಳಿಸಿದ್ದು ಪಂದ್ಯಕ್ಕೆ ತಿರುವು ನೀಡಿತು. ಬಾಬರ್‌ ಮತ್ತು ಶದಾಬ್ ನಡುವೆ ಜೊತೆಯಾಟ ಬಂದರೂ, ಆಮೇಲೆ ಯಾರೂ ಸರಿಯಾಗಿ ಆಡಲಿಲ್ಲ. ಫೀಲ್ಡಿಂಗ್‌ ಕಳಪೆಯಾಗಿತ್ತು. ಒಟ್ಟಾರೆ ಆಡಿದ ರೀತಿಯೇ ನಿರಾಶಾದಾಯಕವಾಗಿತ್ತು’ ಎಂದು ಹೇಳಿದರು.‌

ಸೂಪರ್‌ ಓವರ್‌ನಲ್ಲಿ ಅಮೆರಿಕ 19 ರನ್‌ ಗಳಿಸಿದ್ದು ಪಾಕ್‌ ತಂಡಕ್ಕೆ ದುಬಾರಿಯಾಯಿತು. ಅಮೆರಿಕ ನಾಯಕ ಮೊನಾಂಕ್ ಪಟೇಲ್ ಆಟವನ್ನು ಪ್ರಶಂಸಿಸಿದ ಅಕ್ರಮ್‌, ಅವರು ತಮ್ಮ ಬೌಲಿಂಗ್ ಸಂಪನ್ಮೂಲವನ್ನು ಉತ್ತಮ ರೀತಿ ಬಳಸಿದರಲ್ಲದೇ, ಆಕರ್ಷಕ ಅರ್ಧ ಶತಕ ಗಳಿಸಿದರು. ಅಮೆರಿಕದ ಫೀಲ್ಡಿಂಗ್ ಚೆನ್ನಾಗಿತ್ತು’ ಎಂದು ಹೊಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT