ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup: ದಕ್ಷಿಣ ಆಫ್ರಿಕಾಕ್ಕೆ ಜಿಂಬಾಬ್ವೆ ಸವಾಲು

Last Updated 23 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಹೋಬರ್ಟ್‌ : ದಕ್ಷಿಣ ಆಫ್ರಿಕಾ ತಂಡ ಏಕದಿನ ಅಥವಾ ಟಿ20 ವಿಶ್ವಕಪ್‌ ಟೂರ್ನಿಯನ್ನು ಒಮ್ಮೆಯೂ ಗೆದ್ದುಕೊಂಡಿಲ್ಲ. ಮಾತ್ರವಲ್ಲ, ಫೈನಲ್‌ಗೂ ಪ್ರವೇಶಿಸಿಲ್ಲ.

ವಿಶ್ವಕಪ್‌ ಟೂರ್ನಿಯಲ್ಲಿ ತನ್ನ ದಾಖಲೆಯನ್ನು ಉತ್ತಪಡಿಸಿಕೊಳ್ಳುವ ಕನಸಿನೊಂದಿಗೆ, ತೆಂಬಾ ಬವುಮಾ ನೇತೃತ್ವದ ತಂಡ ‘ಚುಟುಕು ಕ್ರಿಕೆಟ್‌ ಹಬ್ಬ’ದಲ್ಲಿ ಸೋಮವಾರ ಕಣಕ್ಕಿಳಿಯಲಿದೆ. ಹೋಬರ್ಟ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ, ಜಿಂಬಾಬ್ವೆ ಜತೆ ಪೈಪೋಟಿ ನಡೆಸಲಿದೆ.

‘ಸಾಕಷ್ಟು ಸಿದ್ಧತೆಯೊಂದಿಗೆ ಈ ಟೂರ್ನಿಯಲ್ಲಿ ಆಡುತ್ತಿದ್ದೇವೆ. ನಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಬೇಕಿದೆ. ಜಿಂಬಾಬ್ವೆ ವಿರುದ್ದ ಗೆದ್ದು ಸಕಾರಾತ್ಮಕ ಆರಂಭ ಪಡೆಯುವುದು ನಮ್ಮ ಗುರಿ’ ಎಂದು ಬವುಮಾ ಹೇಳಿದ್ದಾರೆ.

ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯುವ ಜತೆಯಲ್ಲೇ, ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳುವ ಸವಾಲು ಬವುಮಾ ಮುಂದಿದೆ. ಭಾರತ ಪ್ರವಾಸದ ವೇಳೆ ಮೂರು ಟಿ20 ಪಂದ್ಯಗಳಲ್ಲಿ ಅವರು ಮೂರು ರನ್‌ ಮಾತ್ರ ಗಳಿಸಿದ್ದರು.

ಜಿಂಬಾಬ್ವೆ ತಂಡ ಶುಕ್ರವಾರ ನಡೆದ ಅರ್ಹತಾ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಮಣಿಸಿ ‘ಸೂಪರ್‌ 12’ ಹಂತ ಪ್ರವೇಶಿಸಿತ್ತು.

ಬಾಂಗ್ಲಾ–ನೆದರ್ಲೆಂಡ್ಸ್‌ ಮುಖಾಮುಖಿ: ದಿನದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೆದರ್ಲೆಂಡ್ಸ್‌ ಜತೆ ಪೈಪೋಟಿ ನಡೆಸಲಿದೆ. ಅರ್ಹತಾ ಹಂತದಲ್ಲಿ ಗೆದ್ದು ಬಂದಿರುವ ನೆದರ್ಲೆಂಡ್ಸ್‌, ಬಾಂಗ್ಲಾಕ್ಕೆ ತಕ್ಕ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಇಂದಿನ ಪಂದ್ಯಗಳು

ಬಾಂಗ್ಲಾದೇಶ– ನೆದರ್ಲೆಂಡ್ಸ್‌

ಆರಂಭ: ಬೆಳಿಗ್ಗೆ 9.30

ದಕ್ಷಿಣ ಆಫ್ರಿಕಾ– ಜಿಂಬಾಬ್ವೆ

ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್‌, ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT