ಭಾನುವಾರ, ನವೆಂಬರ್ 28, 2021
20 °C

ಅಫ್ಗಾನಿಸ್ತಾನ ವಿಶ್ವಕಪ್ ಗೆದ್ದ ಬಳಿಕ ವಿವಾಹ? ಸ್ಪಷ್ಟನೆ ಕೊಟ್ಟ ರಶೀದ್ ಖಾನ್

ಎಎಫ್‍ಪಿ Updated:

ಅಕ್ಷರ ಗಾತ್ರ : | |

ದುಬೈ: ಅಫ್ಗಾನಿಸ್ತಾನವು ವಿಶ್ವಕಪ್ ಗೆದ್ದ ಬಳಿಕವಷ್ಟೇ ವಿವಾಹವಾಗುತ್ತೇನೆ ಎಂಬ ಹೇಳಿಕೆಯನ್ನು ಸ್ಪಿನ್ನರ್ ರಶೀದ್ ಖಾನ್ ಅಲ್ಲಗಳೆದಿದ್ದಾರೆ.

'ನಿಜವಾಗಿಯೂ ಇದನ್ನು ಕೇಳಿದಾಗ ನನಗೆ ತುಂಬಾ ಅಚ್ಚರಿಯಾಯಿತು. ಏಕೆಂದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ವಿಶ್ವಕಪ್ ಗೆದ್ದ ಬಳಿಕ ಮದುವೆಯಾಗುತ್ತೇನೆ ಎಂದು ಎಲ್ಲಿಯೂ ಹೇಳಿರಲಿಲ್ಲ' ಎಂದು 23 ವರ್ಷದ ರಶೀದ್ ತಿಳಿಸಿದರು.

ಇದನ್ನೂಓದಿ: 

'ಮುಂದಿನ ವರ್ಷಗಳಲ್ಲಿ ಮೂರು ವಿಶ್ವಕಪ್‌ಗಳು ಸೇರಿದಂತೆ ಸಾಕಷ್ಟು ಕ್ರಿಕೆಟ್ ಇವೆ. ಹಾಗಾಗಿ ಮದುವೆಯಾಗುವ ಬದಲು ನನ್ನ ಗಮನ ಕ್ರಿಕೆಟ್ ಮೇಲಿರುತ್ತದೆ' ಎಂದಷ್ಟೇ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.

17ರ ಹರೆಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ರಶೀದ್, ಇದುವರೆಗೆ 51 ಪಂದ್ಯಗಳಲ್ಲಿ 95 ವಿಕೆಟ್ ಗಳಿಸಿದ್ದಾರೆ.

'ಇದು ಸ್ಪಿನ್ನರ್‌ಗಳ ವಿಶ್ವಕಪ್ ಎಂದು ನಾನು ಭಾವಿಸುತ್ತೇನೆ. ಇಲ್ಲಿನ ವಿಕೆಟ್ ಸ್ಪಿನ್ನರ್‌ಗಳಿಗೆ ನೆರವಾಗಲಿದ್ದು, ಹಾಗಾಗಿ ಹೆಚ್ಚಿನ ತಂಡಗಳು ಸ್ಪಿನ್ನರ್‌ಗಳನ್ನು ಹೊಂದಲು ಇದುವೇ ಮುಖ್ಯ ಕಾರಣವಾಗಲಿದೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು