ಶನಿವಾರ, ಮೇ 21, 2022
19 °C

T20 WC: ವಿಕೆಟ್ ಬೇಟೆ; ಮಾಲಿಂಗ ದಾಖಲೆ ಮುರಿದ ಶಕೀಬ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಅಲ್ ಅಮೆರತ್: ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಗಳಿಸಿರುವ ಬಾಂಗ್ಲಾದೇಶದ ಎಡಗೈ ಆಫ್ ಸ್ಪಿನ್ನರ್ ಶಕೀಬ್ ಅಲ್ ಹಸನ್ (108 ವಿಕೆಟ್) ನೂತನ ವಿಶ್ವ ದಾಖಲೆ ಬರೆದಿದ್ದಾರೆ.

ಈ ಮೂಲಕ ಶ್ರೀಲಂಕಾದ ದಿಗ್ಗಜ ಬೌಲರ್ ಲಸಿತ್ ಮಾಲಿಂಗ (107 ವಿಕೆಟ್) ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ: 

ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ 'ಬಿ' ಗುಂಪಿನಲ್ಲಿ ಭಾನುವಾರ ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಶಕೀಬ್ ಸ್ಮರಣೀಯ ಮೈಲಿಗಲ್ಲು ತಲುಪಿದ್ದಾರೆ.

ತಮ್ಮ 89ನೇ ಪಂದ್ಯದಲ್ಲಿ (88 ಇನ್ನಿಂಗ್ಸ್) ಶಕೀಬ್, ಮಾಲಿಂಗ ದಾಖಲೆಯನ್ನು ಮುರಿದಿದ್ದಾರೆ. ಮಾಲಿಂಗ 84 ಪಂದ್ಯಗಳಲ್ಲಿ 107 ವಿಕೆಟ್ ಗಳಿಸಿದ್ದಾರೆ.

 

 

 

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಲಿಂಗ ಹಾಗೂ ಶಕೀಬ್ ಮಾತ್ರ 100ಕ್ಕೂ ಹೆಚ್ಚು ವಿಕೆಟ್ ಗಳಿಸಿದ್ದಾರೆ.

 

ಇನ್ನು ಪಟ್ಟಿಯಲ್ಲಿ ಭಾರತೀಯರ ಪೈಕಿ ಯಜುವೇಂದ್ರ ಚಾಹಲ್ 63 ಹಾಗೂ ಜಸ್‌ಪ್ರೀತ್ ಬೂಮ್ರಾ 59 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಸರದಾರರು:
1. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ): 108
2. ಲಸಿತ್ ಮಾಲಿಂಗ (ಶ್ರೀಲಂಕಾ): 107
3. ಟಿಮ್ ಸೌಥಿ (ನ್ಯೂಜಿಲೆಂಡ್): 99
4. ಶಾಹೀದ್ ಆಫ್ರಿದಿ (ಪಾಕಿಸ್ತಾನ): 98
5. ರಶೀದ್ ಖಾನ್ (ಅಫ್ಗಾನಿಸ್ತಾನ): 95

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು