ಸಿಲೆಟ್, ಬಾಂಗ್ಲಾ: ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಅವರ ಮೋಡಿಯ ಮುಂದೆ ನ್ಯೂಜಿಲೆಂಡ್ ತಂಡವು ಬಾಂಗ್ಲಾದೇಶ ಎದುರಿನ ಟೆಸ್ಟ್‌ನಲ್ಲಿ ಸೋತಿತು.

ಪಂದ್ಯದಲ್ಲಿ ಒಟ್ಟು 10 ವಿಕೆಟ್ ಗಳಿಸಿದ ತೈಜುಲ್ (109ಕ್ಕೆ4 ಮತ್ತು 75ಕ್ಕೆ6) ತಮ್ಮ ತಂಡಕ್ಕೆ 150 ರನ್‌ಗಳ ಭರ್ಜರಿ ಜಯದ ಕಾಣಿಕೆ ನೀಡಿತು.

332 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಕಿವೀಸ್ ಬಳಗವು ಶನಿವಾರ ನಡೆದ ಪಂದ್ಯದ ಕೊನೆಯ ದಿನದ ಮೊದಲ ಅವಧಿಯಲ್ಲಿಯೇ 181 ರನ್‌ಗಳಿಗೆ ಆಲವಠ್ ಆಯಿತು.

ಆಫ್‌ಸ್ಪಿನ್ನರ್ ನಯೀಮ್ ಹಸನ್ ಎರಡು, ಶೋರಿಫುಲ್ ಇಸ್ಲಾಂ ಮತ್ತು ಮೆಹದಿ ಹಸನ್ ತಲಾ ಒಂದು ವಿಕೆಟ್ ಗಳಿಸಿದರು.

ಪಂದ್ಯದ ನಾಲ್ಕನೇ ದಿನದಾಟದಲ್ಲಿ ಗುರಿ ಬೆನ್ನಟ್ಟಲು ಆರಂಭಿಸಿದ ಕಿವೀಸ್ 49 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 113 ರನ್ ಗಳಿಸಿತ್ತು. ಕೊನೆಯ ದಿನ ಈ ಮೊತ್ತಕ್ಕೆ 68 ರನ್ ಸೇರುವಷ್ಟರಲ್ಲಿ ಉಳಿದ ಮೂವರು ಬ್ಯಾಟರ್‌ಗಳೂ ಔಟಾದರು.

ಅದರಲ್ಲಿ ಟಿಮ್ ಸೌಥಿ 24 ಎಸೆತಗಳಲ್ಲಿ 34 ರನ್ ಗಳಿಸಿದರು. ಈಶ್ ಸೋಧಿ 91 ಎಸೆತಗಳಲ್ಲಿ 22 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಾಂಗ್ಲಾದೇಶ: 85.1 ಓವರ್‌ಗಳಲ್ಲಿ 310, ನ್ಯೂಜಿಲೆಂಡ್: 101.5 ಓವರ್‌ಗಳಲ್ಲಿ 317. ಎರಡನೇ ಇನಿಂಗ್ಸ್: ಬಾಂಗ್ಲಾದೇಶ: 100.4 ಓವರ್‌ಗಳಲ್ಲಿ 338.

ನ್ಯೂಜಿಲೆಂಡ್: 71.1 ಓವರ್‌ಗಳಲ್ಲಿ 181 (ಡೆರಿಲ್ ಮಿಚೆಲ್ 58, ಟಿಮ್ ಸೌಥಿ 34, ಈಶ್ ಸೋಧಿ 22, ತೈಜುಲ್ ಇಸ್ಲಾಂ 75ಕ್ಕೆ6, ನಯೀಂ ಹಸನ್ 40ಕ್ಕೆ2)

ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ 150 ರನ್‌ಗಳ ಜಯ. ಪಂದ್ಯಶ್ರೇಷ್ಠ: ತೈಜುಲ್ ಇಸ್ಲಾಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.