ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ‘ಟೀಂ ಟರ್ಮಿನೇಟರ್’ ಚಾಂಪಿಯನ್‌

ಜಿಲ್ಲಾ ಕಾವೇರಿ ತಮಿಳು ಸಂಘದಿಂದ ಸಮಾಜದವರಿಗೆ ಕ್ರೀಡಾಕೂಟ
Last Updated 24 ಫೆಬ್ರುವರಿ 2020, 14:28 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲಾ ಕಾವೇರಿ ತಮಿಳು ಸಂಘದ ವತಿಯಿಂದ ಸಮುದಾಯ ಬಾಂಧವರಿಗೆ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಎರಡು ದಿನಗಳು ನಡೆದ ಕ್ರೀಡಾಕೂಟ ಮುಕ್ತಾಯವಾಯಿತು. ಸಮುದಾಯ ಬಾಂಧವರು ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೇರಿಯ ‘ಟೀಂ ಟರ್ಮಿನೇಟರ್’ ತಂಡವು ಚಾಂಪಿಯನ್ ಆಯಿತು. ‘ಕೌಟಿಲ್ಯ ಬ್ರಿಗೇಡಿಯರ್’ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಜಲ್ಲಿಕಟ್ಟ್ ತಂಡ ಪ್ರಥಮ:ಪುರುಷರಿಗೆ ನಡೆದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಪೊನ್ನತ್‌ಮೊಟ್ಟೆಯ ‘ಜಲ್ಲಿಕಟ್ಟ್' ತಂಡ ಪ್ರಥಮ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ‘ಟೀಂ ಬಿಳಿಗೇರಿ' ತಂಡ ಪಡೆದುಕೊಂಡಿತು.

ಬಾಲಕರ ವಿಭಾಗದ ಒಂದು ಕಾಲು ಓಟದ ಸ್ಪರ್ಧೆಯಲ್ಲಿ ಮುಗೀಶ್ (ಪ್ರ), ದಿನಿತ್(ದ್ವಿ), ಸಿದ್ದೇಶ್(ತೃ), ಹುಡುಗಿಯರಿಗೆ ನಡೆದ ಸ್ಪರ್ಧೆಯಲ್ಲಿ ಸಂಧ್ಯಾ(ಪ್ರ), ಪ್ರಿಯದರ್ಶಿನಿ (ದ್ವಿ), ದೀಪಾಲಿ (ತೃ), 100 ಮೀಟರ್ ಬಾಲಕರ ಓಟದ ಸ್ಪರ್ಧೆಯಲ್ಲಿ ದಿನಿತ್ (ಪ್ರ), ಮುಗೀಶ್ (ದ್ವಿ), ಹುಡುಗಿಯರ ವಿಭಾಗದಲ್ಲಿ ಸಂಧ್ಯಾ (ಪ್ರ), ಮಧುಮಿತ (ದ್ವಿ), ದೀಪ್ತಿ (ತೃ) ಬಹುಮಾನ ಪಡೆದುಕೊಂಡರು.

ಮಹಿಳೆಯರಿಗೆ ನಡೆದ ವಿಷದ ಚೆಂಡು ಸ್ಪರ್ಧೆಯಲ್ಲಿ ಅನ್ವಿತಾ (ಪ್ರ), ರಾಜೇಶ್ವರಿ(ದ್ವಿ), ಮಘೇಶ್ವರಿ(ತೃ), ಪುರುಷರ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಈರ್ಲಪ್ಪ (ಪ್ರ), ಧರ್ಮ (ದ್ವಿ), ಸುರೇಶ್(ತೃ).

ಪುರುಷರಿಗೆ ನಡೆದ ಷಾಟ್‌ಪಟ್‌ ಸ್ಪರ್ಧೆಯಲ್ಲಿ ಜಯಕುಮಾರ್ (ಪ್ರ), ಧರ್ಮ(ದ್ವಿ), ಮಹಿಳೆಯರ ವಿಭಾಗದಲ್ಲಿ ರವಿ (ತೃ), ಬಾಲ್ ಎಸೆತ ಸ್ಪರ್ಧೆಯಲ್ಲಿ ಸುಮತಿ (ಪ್ರ), ಸತ್ಯಾ (ದ್ವಿ), ಸಂಧ್ಯಾ (ತೃ), ಮಹಿಳೆಯರಿಗೆ ನಡೆದ 100 ಮೀ ಓಟದ ಸ್ಪರ್ಧೆಯಲ್ಲಿ ವಿಜಿತಾ (ಪ್ರ), ಸುಮತಿ(ದ್ವಿ), ಗೌರಿ(ತೃ) ಬಹುಮಾನ ಪಡೆದುಕೊಂಡರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ 75ಕ್ಕೂ ಅಧಿಕ ಫಲಿತಾಂಶ ಪಡೆದುಕೊಂಡ ಚೈತ್ರಾ, ಪವಿತ್ರ, ಅಜಿತ್, ಶಕುಂತಲಾ, ಸಂಜಯ್ ಕುಮಾರ್, ರೋಜಾ, ಸಂಗೀತಾ, ಪುಷ್ಪರಾಜ್, ದೇವಿಕಾ, ದಿವ್ಯಾ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಮಾತನಾಡಿ, ‘ಕಳೆದ ನಾಲ್ಕೈದು ವರ್ಷಗಳಿಂದ ತಮಿಳು ಸಮುದಾಯ ಬಾಂಧವರನ್ನು ಒಗ್ಗೂಡಿಸುವ ಕಾರ್ಯದಲ್ಲಿ ಸಂಘ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಮುಂದೆಯೂ ಉತ್ತಮ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿ ಇತರರಿಗೆ ಮಾದರಿಯಾಗಬೇಕೆಂದು’ ಸಲಹೆ ನೀಡಿದರು.

ಸಂಘದ ಪ್ರಮುಖರಾದ ಕಾರ್ತಿಕ್ ಮಾತನಾಡಿ, ಸಮುದಾಯ ಬಾಂಧವರ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು, ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮ ಆಯೋಜಿಸಲು ಶ್ರಮಿಸಬೇಕಾಗಿದೆ ಎಂದರು.

ಜಿಲ್ಲಾ ಕಾವೇರಿ ತಮಿಳು ಸಂಘದ ಅಧ್ಯಕ್ಷ ತಿರುಮಾಲ್ ರಾಜ್, ಉಪಾಧ್ಯಕ್ಷ ಕಣ್ಣನ್, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಕ್ರೀಡಾ ಸಮಿತಿ ಸಂಚಾಲಕ ರವಿ, ಸಹ ಸಂಚಾಲಕ ಸುಧಾಕರ್, ಸಂಪಾಜೆ ಅಮ್ಮನ್ ಸೊಸೈಟಿಯ ಶಿವಪೆರುಮಾಲ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT