ಸೋಮವಾರ, ಮೇ 23, 2022
22 °C

IND vs ENG: 2 ವಿಕೆಟ್‌ ಅಂತರದಲ್ಲಿದೆ ಭಾರತದ ಗೆಲುವು

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲು 2 ವಿಕೆಟ್‌ಗಳ ಅಗತ್ಯತೆ ಇದೆ.

ಹೌದು, ಮಂಗಳವಾರ 429 ರನ್ ಗುರಿ ಬೆನ್ನತ್ತಿರುವ ಇಂಗ್ಲೆಂಡ್‌ ಪಡೆ ಡ್ಯಾನ್ ಲಾರೆನ್ಸ್ ವಿಕೆಟ್‌ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಎದುರಿಸಿತು. ಬಳಿಕ ಕ್ರೀಸ್‌ಗೆ ಬಂದ ಜೋ ರೂಟ್ 33, ಜ್ಯಾಕ್ ಲೀಚ್ 00, ಬೆನ್ ಸ್ಟೋಕ್ಸ್‌ 8, ಒಲಿ ಪೋಪ್ 12, ಬೆನ್ ಫೋಕ್ಸ್‌ 2 ರನ್‌ ಗಳಿಸಿ ಔಟಾದರು.

ಭಾರತದ ಪರ ಆರ್. ಅಶ್ವಿನ್‌ 3, ಅಕ್ಷರ್ ಪಟೇಲ್‌ 3, ಕುಲದೀಪ್‌ ಯಾದವ್‌ 1 ವಿಕೆಟ್‌ ಪಡೆದಿದ್ದಾರೆ. ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 116 ರನ್‌ ಗಳಿಸಿದೆ. ಮೋಯಿನ್ ಅಲಿ ಹಾಗೂ ಒಲಿ ಸ್ಟೋನ್ ಕ್ರೀಸ್‌ನಲ್ಲಿದ್ದಾರೆ.

ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ 227 ರನ್‌ಗಳಿಂದ ಭಾರತ ತಂಡ ಸೋತಿತ್ತು.

ಇದನ್ನೂ ಓದಿ... ಎಂ.ಎಸ್‌.ಧೋನಿ ಸಿನಿಮಾದ ನಟ ಸಂದೀಪ್‌ ನಾಹರ್‌ ಆತ್ಮಹತ್ಯೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು