ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಏಕದಿನ ಸರಣಿಯ ಮೊದಲ ಪಂದ್ಯ | ಕೇಟಿ ಮ್ಯಾಕ್ ಶತಕ: ಗೆದ್ದ ಆಸ್ಟ್ರೇಲಿಯಾ ‘ಎ’

Published : 14 ಆಗಸ್ಟ್ 2024, 15:10 IST
Last Updated : 14 ಆಗಸ್ಟ್ 2024, 15:10 IST
ಫಾಲೋ ಮಾಡಿ
Comments

ಮ್ಯಾಕೆ (ಆಸ್ಟ್ರೇಲಿಯಾ): ಆರಂಭ ಆಟಗಾರ್ತಿ ಕೇಟಿ ಮ್ಯಾಕ್ ಅವರ ಅಮೋಘ ಶತಕದ (129, 126ಎ, 4x11) ನೆರವಿನಿಂದ ಆಸ್ಟ್ರೇಲಿಯಾ ‘ಎ’ ತಂಡ ಬುಧವಾರ ನಡೆದ ಮಹಿಳೆಯರ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ‘ಎ’ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು.

ಇದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ‘ಎ’ ವನಿತೆಯರಿಗೆ ಸತತ ನಾಲ್ಕನೇ ಸೋಲು. ಈ ಸರಣಿಗೆ ಮೊದಲು ಬ್ರಿಸ್ಬೇನ್‌ನಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯರು 3–0 ಯಿಂದ ಗೆದ್ದುಕೊಂಡಿದ್ದರು.

ಮೊದಲು ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಭಾರತ ‘ಎ’ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ತೇಜಲ್‌ ಹಸಬ್ನಿಸ್‌ (53, 67 ಎಸೆತ, 4x7) ಮತ್ತು ರಾಘವಿ ಬಿಷ್ಟ್‌ (82, 102ಎ, 4x6) ಅವರು ಅರ್ಧಶತಕಗಳ ಮೂಲಕ ಉಪಯುಕ್ತ ಕೊಡುಗೆ ನೀಡಿದರು.

ಭಾರತ ‘ಎ’ ತಂಡ 50 ಓವರುಗಳಲ್ಲಿ 9 ವಿಕೆಟ್‌ಗೆ 249 ರನ್ ಗಳಿಸಿದರೆ, ಆತಿಥೇಯರು ಇನ್ನೂ 18 ಎಸೆತಗಳಿರುವಂತೆ 6 ವಿಕೆಟ್‌ಗೆ 250 ರನ್ ಬಾರಿಸಿ ಗೆಲುವನ್ನು ಆಚರಿಸಿದರು. ಕೇಟಿ ಮ್ಯಾಕ್‌ ಮತ್ತು ಮ್ಯಾಡಿ ಡಾರ್ಕ್ (27) ಅವರು ಮೊದಲ ವಿಕೆಟ್‌ಗೆ 50 ರನ್ ಸೇರಿಸಿ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಒದಗಿಸಿದರು. ನಾಯಕಿ ತೆಹ್ಲಿಯಾ ಮೆಕ್‌ಗ್ರಾತ್ (56) ಅವರು ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ ಆಟವಾಡಿದರು.

ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. 11 ರನ್‌ಗಳಾಗುವಷ್ಟರಲ್ಲೊ ಆರಂಭ ಆಟಗಾರ್ತಿಯರಾದ ಶ್ವೇತಾ ಸೆಹ್ರಾವತ್‌ (1), ಪ್ರಿಯಾ ಪುನಿಯಾ (6) ನಿರ್ಗಮಿಸಿದ್ದರು.

ಸ್ಕೋರುಗಳು:

ಭಾರತ ‘ಎ’: 50 ಓವರುಗಳಲ್ಲಿ 9 ವಿಕೆಟ್‌ಗೆ 249 (ತೇಜಲ್‌ ಹಸಬ್ನಿಸ್‌ 53, ರಾಘವಿ ಬಿಷ್ಟ್‌ 82, ಮಿನ್ನು ಮಣಿ 27, ಶಿಪ್ರಾ ಗಿರಿ ಔಟಾಗದೇ 25; ನಿಕೋಲಾ ಹೆನ್ಕಾಕ್‌ 40ಕ್ಕೆ2, ಮೈತ್ಲಾನ್ ಬ್ರೌನ್‌ 23 ಕ್ಕೆ4, ಗ್ರೇಸ್‌ ಪಾರ್ಸನ್ಸ್ 40ಕ್ಕೆ2);

ಆಸ್ಟ್ರೇಲಿಯಾ ‘ಎ’: 47 ಓವರುಗಳಲ್ಲಿ 6 ವಿಕೆಟ್‌ಗೆ 250 (ಕೇಟಿ ಮ್ಯಾಕ್‌ 129, ಮ್ಯಾಡಿ ಡಾರ್ಕ್ 27, ಚಾರ್ಲಿ ನಾಟ್‌ 26, ತಹ್ಲಿಯಾ ಮೆಕ್‌ಗ್ರಾತ್‌ 56; ಮೇಘನಾ ಸಿಂಗ್ 43ಕ್ಕೆ2, ಮಿನ್ನು ಮಣಿ 53ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT