ಬೆಂಗಳೂರು: ಭಾನುವಾರ ಮಧ್ಯಾಹ್ನ ಉರಿಬಿಸಿಲಿನಲ್ಲಿ ಆಕರ್ಷಕ ಬ್ಯಾಟಿಂಗ್ ಮಾಡಿದ ಆರ್. ಸಮರ್ಥ್ ಮತ್ತು ಅಭಿಮನ್ಯು ಈಶ್ವರನ್ ಅವರಿಬ್ಬರೂ ಶತಕದ ಸಮೀಪ ಎಡವಿದರು. ಆದರೆ, ತಂಡದ ರನ್ಗಳಿಕೆಗೆ ಉತ್ತಮ ಅಡಿಪಾಯ ಹಾಕಿದರು. ಅಲ್ಲದೇ ತಾವೂ ಕೂಡ ಮತ್ತೆ ಲಯಕ್ಕೆ ಮರಳಿದರು.

ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ‘ಟೆಸ್ಟ್’ ನ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ‘ಎ’ ತಂಡವು ಗಳಿಸಿದ 346 ರನ್ಗಳ ಮೊತ್ತಕ್ಕೆ ಭಾರತ ‘ಎ’ ತಂಡವು ದಿಟ್ಟ ಉತ್ತರ ನೀಡಿದೆ. ಎರಡನೇ ದಿನದಾಟದ ಕೊನೆಗೆ 70 ಓವರ್ಗಳಲ್ಲಿ 3 ವಿಕೆಟ್ಗಳಿಗೆ 223 ರನ್ ಗಳಿಸಿದೆ. ಸಮರ್ಥ್ (83; 126ಎಸೆತ, 8ಬೌಂಡರಿ) ಮತ್ತು ಈಶ್ವರನ್ (86; 165ಎಸೆತ, 10ಬೌಂಡರಿ) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 174 ರನ್ ಗಳಿಸಿದರು.

ಹೋದ ಜುಲೈನಲ್ಲಿ ಅವರು ವೆಸ್ಟ್ ಇಂಡೀಸ್ ಎ ತಂಡದ ವಿರುದ್ಧ ಶತಕ ಬಾರಿಸಿದ್ದ ಸಮರ್ಥ್, ನಂತರದ ಆರು ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದರು. ಆದರೆ ಇಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದರು. ಅನಿರೀಕ್ಷಿತ ತಿರುವು ಮತ್ತು ಪುಟಿತದಿಂದ ಚಕಿತಗೊಳಿಸುತ್ತಿದ್ದ ಎಸೆತಗಳನ್ನು ‘ಸಮರ್ಥ’ವಾಗಿ ಎದುರಿಸಿದರು. ಸ್ವೀಪ್, ಕಟ್ಗಳನ್ನು ಆಡಿದರು. ಸ್ಲಿಪ್ ಫೀಲ್ಡರ್ಗಳ ಮಧ್ಯದಿಂದ ಚೆಂಡನ್ನು ಬೌಂಡರಿಗೆರೆ ಮುಟ್ಟಿಸುವಲ್ಲಿ ಯಶಸ್ವಿಯಾದರು. ಇನ್ನೊಂದು ತುದಿಯಲ್ಲಿದ್ದ ಈಶ್ವರನ್ ಅವರಿಗೆ ಅದೃಷ್ಟ ಜೊತೆ ನೀಡಿತು. ಒಂದು ಬಾರಿ ಅವರು ಕೂದಲೆಳೆಯ ಆಂತರದಲ್ಲಿ ರನ್ಔಟ್ ನಿಂದ ಪಾರಾದರು. ಸಮರ್ಥ್ಗಿಂತಲೂ ಅವರು ತಾಳ್ಮೆಯಿಂದ ಆಡಿದರು.

ಸಮರ್ಥ್ 69 ಎಸೆತಗಳಲ್ಲಿ 50ರ ಗಡಿ ತಲುಪಿದರು. ಈಶ್ವರನ್ 116 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಚಹಾ ವಿರಾಮದವರೆಗೂ ಇವರ ಜೊತೆಯಾಟವನ್ನು ಮುರಿಯಲು ಬೌಲರ್ಗಳು ಪರದಾಡಿದರು. ಬೌಂಡರಿ, ಸಿಕ್ಸರ್ಗಳನ್ನು ಹೊಡೆಯುವ ಬದಲು, ಒಂದು ಮತ್ತು ಎರಡು ರನ್ ಪಡೆಯುವತ್ತಲೇ ಇಬ್ಬರೂ ಹೆಚ್ಚು ಒತ್ತು ನೀಡಿದರು.

48ನೇ ಓವರ್ನಲ್ಲಿ ಆ್ಯಷ್ಟನ್ ಅಗರ್ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಸಮರ್ಥ್ ಬಿದ್ದರು. ಜೊತೆಯಾಟ ಮುರಿಯಿತು. ಅದಾಗಿ ಎರಡು ಓವರ್ಗಳ ನಂತರ ಮಾರ್ನಸ್ ಲಾಬುಚಾನ್ ಅವರ ನಿಖರ ಥ್ರೋದಿಂದಾಗಿ ಈಶ್ವರನ್ ರನ್ಔಟ್ ಆದರು.

ನಂತರ ನಾಯಕ ಶ್ರೇಯಸ್ ಅಯ್ಯರ್ (ಬ್ಯಾಟಿಂಗ್ 30) ಮತ್ತು ಅಂಕಿತ್ ಭಾವ್ನೆ ಅವರು ನಿಧಾನವಾಗಿ ರನ್ ಗಳಿಸಿದರು. 68ನೇ ಓವರ್ನಲ್ಲಿ ಅಂಕಿತ್ ಔಟಾದರು. ಕ್ರೀಸ್ಗೆ ಬಂದ ಶುಭಮನ್ ಗಿಲ್ (ಬ್ಯಾಟಿಂಗ್ 6) ಶ್ರೇಯಸ್ ಜೊತೆಗೆ ನಿಧಾನವಾಗಿ ಇನಿಂಗ್ಸ್ ಕಟ್ಟುವ ಪ್ರಯತ್ನ ಆರಂಭಿಸಿದ್ದಾರೆ.

ಮಾರ್ಷ್ ಶತಕ: ಯಾದವ್ಗೆ ಐದು ವಿಕೆಟ್

ಸುಮಾರು ನಾಲ್ಕು ತಿಂಗಳುಗಳ ವಿಶ್ರಾಂತಿಯ ನಂತರ ಕಣಕ್ಕಿಳಿದ ಮಿಚೆಲ್ ಮಾರ್ಷ್ (ಔಟಾಗದೆ 113; 204ಎಸೆತ, 16ಬೌಂಡರಿ, 1ಸಿಕ್ಸರ್) ಅಮೋಘ ಶತಕ ದಾಖಲಿಸಿದರು.

ಶನಿವಾರದ ದಿನದಾಟದ ಅಂತ್ಯಕ್ಕೆ 86 ರನ್ ಗಳಿಸಿದ್ದ ಅವರು ಕ್ರೀಸ್ನಲ್ಲಿದ್ದರು. ತಂಡವು 6 ವಿಕೆಟ್ಗಳಿಗೆ 290 ರನ್ ಗಳಿಸಿತ್ತು. ಎರಡನೇ ದಿನದಾಟದ ಆರಂಭದಿಂದಲೇ ಅವರು ಬಿರುಸಿನ ಆಟವಾಡಿದರು. ಆದರೆ ಇನ್ನೊಂದು ಬದಿಯಲ್ಲಿ ವಿಕೆಟ್ಗಳು ಉರುಳಿದವು.

ಚೈನಾಮನ್ ಬೌಲರ್ ಕುಲದೀಪ್ ಯಾದವ್ ಒಟ್ಟು ಐದು ವಿಕೆಟ್ ಗಳಿಸಿದರು.

ಸ್ಕೋರ್

ಮೊದಲ ಇನಿಂಗ್ಸ್
ಆಸ್ಟ್ರೇಲಿಯಾ 346 (109 ಓವರ್ಗಳಲ್ಲಿ)

ಮಿಚೆಲ್ ಮಾರ್ಷ್ ಔಟಾಗದೆ 113

ಮೈಕೆಲ್ ನೆಸೆರ್ ಸಿ ಶ್ರೇಯಸ್ ಅಯ್ಯರ್ ಬಿ ಶಾಬಾಜ್ ನದೀಂ 44

ಕ್ರಿಸ್ ಟ್ರೆಮೆನ್ ಬಿ ಕುಲದೀಪ್ ಯಾದವ್ 16

ಮಿಚೆಲ್ ಸ್ವೆಪ್ಸನ್ ಸಿ ಭರತ್ ಬಿ ಕುಲದೀಪ್ ಯಾದವ್ 04

ಬ್ರೆಂಡನ್ ಡಾಜೆಟ್ ಸಿ ಶ್ರೇಯಸ್ ಅಯ್ಯರ್ ಬಿ ಕುಲದೀಪ್ ಯಾದವ್ 08

ಇತರೆ: 14 (ನೋಬಾಲ್ 5, ವೈಡ್ 1, ಲೆಗ್ಬೈ 8)

ವಿಕೆಟ್ ಪತನ: 7–290(ಮೈಕೆಲ್; 91.6), 8–322(ಕ್ರಿಸ್; 102.3), 9–328 (ಸ್ವೆಪ್ಸನ್; 106.3), 10–346 (ಬ್ರೆಂಡನ್; 108.6)

ಬೌಲಿಂಗ್
ದೀಪಕ್ ಚಹಾರ್ 13–2–40–0, ರಜನೀಶ್ ಗುರುಬಾನಿ 16–2–57–1, ಕೆ. ಗೌತಮ್ 21–7–60–1, ಕುಲದೀಪ್ ಯಾದವ್ 27–3–91–5, ಶಾಬಾಜ್ ನದೀಂ 32–9–90–3

ಭಾರತ ‘ಎ’
3ಕ್ಕೆ 223 (70 ಓವರ್ಗಳಲ್ಲಿ)

ಆರ್. ಸಮರ್ಥ್ ಎಲ್ಬಿಡಬ್ಲ್ಯು ಬಿ ಆಷ್ಟನ್ ಅಗರ್83

ಅಭಿಮನ್ನು ಈಶ್ವರನ್ ರನ್ಔಟ್ ಬಿ ಮಾರ್ನಸ್ ಲಾಬುಚಾನ್ 86

ಶ್ರೇಯಸ್ ಅಯ್ಯರ್ ಬ್ಯಾಟಿಂಗ್ 30

ಅಂಕಿತ್ ಭಾವ್ನೆ ಸಿ ಮ್ಯಾಥ್ಯೂ ರೆನ್ಶಾ ಬಿ ಮಿಚೆಲ್ ಸ್ವೆಪ್ಸನ್ 13

ಶುಭಮನ್ ಗಿಲ್ ಬ್ಯಾಟಿಂಗ್ 06

ಇತರೆ: 05 (ನೋಬಾಲ್ 4, ವೈಡ್ 1)

ವಿಕೆಟ್ ಪತನ: 1–174 (ಸಮರ್ಥ್;47.4), 2–176 (ಈಶ್ವರನ್: 49.1), 3–217 (ಅಂಕಿತ್; 67.2)

ಬೌಲಿಂಗ್
ಕ್ರಿಸ್ ಟ್ರೆಮೆನ್ 8–2–10–0,ಬ್ರೆಂಡನ್ ಡಾಜೆಟ್ 7–0–43–0, ಆಷ್ಟನ್ ಅಗರ್ 23–8–41–1,
ಮೈಕೆಲ್ ನೆಸೆರ್ 6–0–16–0, ಮಿಚೆಲ್ ಸ್ವೆಪ್ಸನ್ 17–0–61–1, ಮಿಚೆಲ್ ಮಾರ್ಷ್ 5–0–26–0, ಟ್ರಾವಿಸ್ ಹೆಡ್ 4–0–26–0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.