ಟೆಸ್ಟ್‌ ಕ್ರಿಕೆಟ್: ಭಾನುವಾರದಿಂದ ಭಾರತ ‘ಎ’ – ಆಸ್ಟ್ರೇಲಿಯಾ ‘ಎ’ ಹಣಾಹಣಿ

7

ಟೆಸ್ಟ್‌ ಕ್ರಿಕೆಟ್: ಭಾನುವಾರದಿಂದ ಭಾರತ ‘ಎ’ – ಆಸ್ಟ್ರೇಲಿಯಾ ‘ಎ’ ಹಣಾಹಣಿ

Published:
Updated:
Deccan Herald

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರದಿಂದ ಮತ್ತೆ ‘ಟೆಸ್ಟ್‌’ ಕ್ರಿಕೆಟ್‌ನ ಸೊಬಗು ಅರಳಲಿದೆ. ಭಾರತ ‘ಎ’ ಮತ್ತು ಆಸ್ಟ್ರೇಲಿಯಾ ‘ಎ’ ತಂಡಗಳು ಮುಖಾಮುಖಿಯಾಗಲಿವೆ.

ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ‘ಎ’ ತಂಡದಲ್ಲಿ ಕರ್ನಾಟಕದ ಮಯಂಕ್ ಅಗರವಾಲ್, ಆರ್. ಸಮರ್ಥ್, ಕೃಷ್ಣಪ್ಪ ಗೌತಮ್ ಅವರು ಆಡಲಿದ್ದಾರೆ. ಹೋದ ತಿಂಗಳು ದಕ್ಷಿಣಾ  ಆಫ್ರಿಕಾ ‘ಎ’  ಎದುರು ನಡೆದಿದ್ದ ಸರಣಿಯಲ್ಲಿ ಭಾರತ ಎ ತಂಡವು 1–0ಯಿಂದ ಗೆದ್ದಿತ್ತು.  ಮೂರು ದಿನಗಳ ಹಿಂದಷ್ಟೇ ಮುಗಿದಿದ್ದ ಚತುಷ್ಕೋನ  ಏಕದಿನ ಕ್ರಿಕೆಟ್ ಸರಣಿಯಲ್ಲಿ ‘ಎ‘ ತಂಡವು ಮೂರನೇ ಸ್ಥಾನ ಪಡೆದಿತ್ತು. ಆಸ್ಟ್ರೇಲಿಯಾ ‘ಎ’ ತಂಡವು ಫೈನಲ್‌ನಲ್ಲಿ ಭಾರತ ‘ಬಿ’ ಎದುರು ಸೋತಿತ್ತು.

ಧಕ್ಷಿಣ ಆಫ್ರಿಕಾ ಎ ಎದುರಿನ ಸರಣಿಯಲ್ಲಿ ಒಂದು ದ್ವಿಶತಕ ಬಾರಿಸಿದ್ದ ಮಯಂಕ್ ಅಗರವಾಲ್ ಈ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಅವರೊಂದಿಗೆ ಇನ್ನೊಬ್ಬ ಕನ್ನಡಿಗ ಆರ್. ಸಮರ್ಥ್ ಕೂಡ ಕಣಕ್ಕಿಳಿಯುವ ನಿರೀಕ್ಷೆ ಇದೆ. ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಮತ್ತು ಹನುಮವಿಹಾರಿ ಅವರು ಇಂಗ್ಲೆಂಡ್ ನಲ್ಲಿ ಆಡುತ್ತಿರುವ ಭಾರತ ತಂಡದಲ್ಲಿದ್ದಾರೆ.

ಆದ್ದರಿಂದ ಇಲ್ಲಿ ಶುಭಮನ್ ಗಿಲ್ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗಲಿದೆ. ಬೌಲಿಂಗ್‌ ವಿಭಾಗದಲ್ಲಿ ಮಧ್ಯಮವೇಗಿಗಳಾದ ಮೊಹಮ್ಮದ್ ಸಿರಾಜ್, ರಜನೀಶ್ ಗುರುಬಾನಿ, ನವದೀಪ್ ಸೈನಿ  ಉತ್ತಮ ಲಯದಲ್ಲಿದ್ದಾರೆ. ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್, ಕೆ. ಗೌತಮ್  ಅವರೂ ಆಲ್‌ರೌಂಡ್ ಆಟ ಆಡಬಲ್ಲರು.

ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಪಡೆ ಉತ್ತಮವಾಗಿದೆ. ಉಸ್ಮಾನ್ ಖ್ವಾಜಾ, ಟ್ರಾವಿಸ್ ಹೆಡ್‌, ಮಿಚೆಲ್ ಮಾರ್ಷ್ ಅವರು ಉತ್ತಮ ಮೊತ್ತ ಪೇರಿಸಬಲ್ಲ ಸಮರ್ಥರು. ಪ್ಯಾಟರ್ಸನ್ ಮತ್ತು ಜೋಲ್ ಪ್ಯಾರಿಸ್‌ ಅವರು ಉತ್ತಮ ಬೌಲಿಂಗ್ ಮಾಡಿ ಎದುರಾಳಿಗಳನ್ನು ಒತ್ತಡಕ್ಕೆ ತಳ್ಳಬಲ್ಲರು.

ತಂಡಗಳು: 
ಭಾರತ ‘ಎ’:
ಶ್ರೇಯಸ್ ಅಯ್ಯರ್(ನಾಯಕ), ಎ.ಆರ್. ಈಶ್ವರನ್, ಶುಭಮನ್ ಗಿಲ್, ಅಂಕಿತ್ ಭಾವ್ನೆ, ಶಾಬಾಜ್ ನದೀಂ, ಕುಲದೀಪ್ ಯಾದವ್, ಕೆ.ಎಸ್. ಭರತ್, ಅಂಕಿತ್ ರಜಪೂತ್, ಕೆ.ಗೌತಮ್, ಮಯಂಕ್ ಅಗರವಾಲ್,  ಆರ್. ಸಮರ್ಥ, ರಜನೀಶ್ ಗುರುಬಾನಿ, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ ‘ಎ’: ಟ್ರಾವಿಸ್ ಹೆಡ್(ನಾಯಕ). ಅಲೆಕ್ಸ್‌ ಕ್ಯಾರಿ, ಮಾರ್ನಸ್ ಲಾಬುಚೇನ್, ಮೈಕೆಲ್ ನೆಸರ್, ಜೇ ರಿಚರ್ಡ್‌ಸನ್, ಡಾರ್ಚಿ ಶಾರ್ಟ್, ಬಿಲ್ಲಿ ಸ್ಟಾನ್‌ಲೇಕ್, ಕ್ರಿಸ್ ಟ್ರಿಮೇನ್, ಜ್ಯಾಕ್‌ ವೈಲ್ಡ್‌ರ್‌ಮುತ್, ಜೊಲ್ ಪ್ಯಾರಿಸ್, ಜೊನಾಥನ್ ಮೆರಿಯೊ, ಕ್ಯಾಮರಾನ್ ಗ್ರೀನ್, ಬ್ರೆಂಡನ್ ಡಾಗೆಟ್, ಜಾನ್ ಹಾಲಂಡ್, ಕುರ್ತಿಸ ಪ್ಯಾಟರ್ಸನ್, ಉಸ್ಮಾನ್ ಖ್ವಾಜಾ,  ಪೀಟರ್ ಹ್ಯಾಂಡ್ಸ್‌ಕಂಬ್, ಆಷ್ಟನ್ ಆಗರ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ರೆನ್‌ಶಾ, ಮಿಚೆಲ್ ಸ್ವೆಪ್ಸನ್,

ಪಂದ್ಯ ಆರಂಭ: ಬೆಳಿಗ್ಗೆ 9

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !