ಮಂಗಳವಾರ, ಏಪ್ರಿಲ್ 13, 2021
32 °C

ಕೋವಿಡ್: ಟಿ20 ವಿಶ್ವಕಪ್ ಅರ್ಹತಾ ಟೂರ್ನಿಗಳ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ (ಪಿಟಿಐ): ಕೊರೊನಾ ವೈರಸ್ ಪ್ರಸರಣ ಹೆಚ್ಚುತ್ತಿರುವುದರಿಂದ 2022ರ ಪುರುಷರ ಟಿ20 ಏಷ್ಯಾ ಮತ್ತು ವಿಶ್ವಕಪ್ ಅರ್ಹತಾ ಸುತ್ತಿನ ಮೂರು ಟೂರ್ನಿಗಳನ್ನು ಮುಂದೂಡಲಾಗಿದೆ.

ಏಪ್ರಿಲ್ 3 ಮತ್ತು 9ರಂದು ಏಷ್ಯಾ ಎ ಕ್ವಾಲಿಫೈಯರ್ ಪಂದ್ಯಗಳು ಆಯೋಜನೆಗೊಂಡಿದ್ದವು. ಬಹರೇನ್, ಕುವೈತ್, ಮಾಲ್ಡೀವ್ಸ್‌, ಕತಾರ್ ಮತ್ತು ಸೌದಿ ಅರೇಬಿಯಾ ತಂಡಗಳು ಈ ಪಂದ್ಯಗಳಲ್ಲಿ ಆಡಬೇಕಿತ್ತು. 

ಈ ಪಂದ್ಯಗಳನ್ನು ಕುವೈತ್‌ನಲ್ಲಿ ಅಕ್ಟೋಬರ್‌ನಲಲಿ 23 ರಿಂದ 29ರವರೆಗೆ ನಡೆಸಲಾಗುವುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ.

ಟಿ20 ವಿಶ್ವಕಪ್ ಪ್ರಾದೇಶಿಕ ಅರ್ಹತಾ ಟೂರ್ನಿಗಳಾದ ಆಫ್ರಿಕಾ ಎ ಮತ್ತು ಬಿ ಕ್ವಾಲಿಫೈಯರ್ ಪಂದ್ಯಗಳನ್ನೂ ಮುಂದೂಡಲಾಗಿದೆ.

ಎ ಗುಂಪಿನ ಕ್ವಾಲಿಫೈಯರ್‌ನಲ್ಲಿ ಅಕ್ಟೋಬರ್‌ 25 ರಿಂದ 31ರಂದು ನಡೆಸಲು ಉದ್ಧೇಶಿಸಲಾಗಿದೆ. ಇದರಲ್ಲಿ ಘಾನಾ, ಲೆಸೊತೊ, ಮಲಾವಿ, ರವಾಂಡಾ, ಸೇಚೆಲ್ಸ್, ಸ್ವಿಜರ್‌ಲೆಂಡ್ ಮತ್ತು ಉಗಾಂಡಾ, ಕ್ವಾಲಿಫೈಯರ್‌ ಬಿ ಗುಂಪಿನಲ್ಲಿ ಬೋತ್ಸವಾನಾ, ಕ್ಯಾಮರೂನ್, ಮೊಜಾಂಬಿಕ್, ಸಿಯೆರಾ ಲಿಯೊನ್, ಸೇಂಟ್ ಹೆಲೆನಾ ಮತ್ತು ತಾಂಜಾನಿಯಾ ತಂಡಗಳು ಆಡಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು