ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್: ಮುಂದಿನ ವರ್ಷಕ್ಕೂ ಇದೇ ಟಿಕೆಟ್

Last Updated 21 ಜುಲೈ 2020, 12:24 IST
ಅಕ್ಷರ ಗಾತ್ರ

ದುಬೈ: ಇದೇ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಟ್ವೆಂಟಿ–20 ವಿಶ್ವಕಪ್ ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಈ ಟೂರ್ನಿಯ ಪಂದ್ಯಗಳ ಟಿಕೆಟ್‌ಗಳು ಮುಂದಿನ ವರ್ಷಕ್ಕೆ ಬಳಸಬಹುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿಳಿಸಿದೆ.

ಸೋಮವಾರ ನಡೆದ ಐಸಿಸಿ ಸಭೆಯಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡಲು ನಿರ್ಧರಿಸಲಾಯಿತು. ಆಸ್ಟ್ರೇಲಿಯಾದಲ್ಲಿ ಈ ಟೂರ್ನಿ ಆಯೋಜಿಸಲಾಗಿತ್ತು. ಮುಂದಿನ ವರ್ಷವೂ ಅಲ್ಲಿಯೇ ಟೂರ್ನಿ ನಡೆದರೆ ಮಾತ್ರ ಟಿಕೆಟ್‌ಗಳ ಮೌಲ್ಯ ಇರುತ್ತದೆ.‌

’2022ರಲ್ಲಿ ಟೂರ್ನಿಯು ಮುಂದೂಡಲಾದರೆ ಅಥವಾ ಒಂದೊಮ್ಮೆ ಭಾರತದಲ್ಲಿ ಟೂರ್ನಿ ನಡೆದರೆ ಈ ಟಿಕೆಟ್‌ಗಳ ಹಣವನ್ನು ಮರುಪಾವತಿ ಮಾಡಲಾಗುವುದು‘ ಎಂದು ಐಸಿಸಿ ತಿಳಿಸಿದೆ.

ಹಣ ವಾಪಾಸ್ ಪಡೆಯುವವರು ಡಿಸೆಂಬರ್ 15ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಮೂವತ್ತು ದಿನಗಳವರೆಗೆ ಮರುಪಾವತಿ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT