ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಕ್ರಿಕೆಟ್ ವಿಶ್ವಕಪ್ : 18 ವರ್ಷದೊಳಗಿನವರಿಗೆ ಉಚಿತ ಪ್ರವೇಶ

Published : 25 ಸೆಪ್ಟೆಂಬರ್ 2024, 14:00 IST
Last Updated : 25 ಸೆಪ್ಟೆಂಬರ್ 2024, 14:00 IST
ಫಾಲೋ ಮಾಡಿ
Comments

ದುಬೈ (ಪಿಟಿಐ): ಮುಂದಿನ ತಿಂಗಳು ಇಲ್ಲಿ ನಡೆಯಲಿರುವ  ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು 18 ವರ್ಷದವರಿಗೆ ಉಚಿತ ಪ್ರವೇಶ ನೀಡಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿರ್ಧರಿಸಿದೆ. ಅಲ್ಲದೇ 18 ವರ್ಷ ಮೇಲಿನವರಿಗಾಗಿ ಇರುವ ಟಿಕೆಟ್‌ಗಳಿಗೆ ಅತ್ಯಂತ ಕಡಿಮೆ ದರ ನಿಗದಿಪಡಿಸಲಾಗಿದೆ.

‘ಟಿಕೆಟ್‌ಗಳು ಹೆಚ್ಚು ದುಬಾರಿಯಾಗಿಲ್ಲ. ಎಲ್ಲರ ಕೈಗೆಟಕುವಂತೆ ದರಗಳನ್ನು ನಿಗದಿ ಮಾಡಲಾಗಿದೆ. ಯುಎಇಯ 5 ದಿರಾಮ್ (₹ 114) ಬೆಲೆಯ ಟಿಕೆಟ್‌ಗಳು ಲಭ್ಯ ಇವೆ. ಡಬಲ್ ಹೆಡರ್‌ (ಒಂದೇ ದಿನ ಎರಡು ಪಂದ್ಯಗಳು) ಪಂದ್ಯಗಳಿಗೆ 40 ದಿರಾಮ್ (₹910) ನಿಗದಿ ಪಡಿಸಲಾಗಿದೆ. ಒಂದೇ ಟಿಕೆಟ್‌ನಲ್ಲಿ ಎರಡೂ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಿದೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

‘ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ ಮತ್ತು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಿಕೆಟ್ ಖರೀದಿಗಾಗಿ ಕಿಯಾಸ್ಕ್‌ಗಳನ್ನು ಇಡಲಾಗಿದೆ. ಜನರ ಅನುಕೂಲಕ್ಕಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದೂ ತಿಳಿಸಲಾಗಿದೆ.

ಅಕ್ಟೋಬರ್ 3ರಿಂದ ವಿಶ್ವಕಪ್ ಟೂರ್ನಿ ನಡೆಯಲಿದೆ. ಹತ್ತು ತಂಡಗಳು (ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ) ಸ್ಪರ್ಧಿಸಲಿವೆ. 20ರಂದು ಫೈನಲ್ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT