ಬುಧವಾರ, ನವೆಂಬರ್ 25, 2020
19 °C

ಮಗನೊಂದಿಗೆ ಕಣಕ್ಕಿಳಿಯಲಿರುವ ಟೈಗರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್ (ಎಪಿ):  ಗಾಲ್ಫ್ ಕ್ರೀಡೆಯ ದಂತಕಥೆ ಟೈಗರ್ ವುಡ್ಸ್ ಅವರು ಪಿಎನ್‌ಸಿ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ 11 ವರ್ಷದ ಮಗ ಚಾರ್ಲಿಯೊಂದಿಗೆ ಕಣಕ್ಕಿಳಿಯಲಿದ್ದಾರೆ.

ಅಪ್ಪ–ಮಗ ಚಾಲೆಂಜ್ ಅಂಗವಾಗಿ ಅವರು ಈ ಟೂರ್ನಿಯಲ್ಲಿ ತಮ್ಮ ಪುತ್ರನೊಂದಿಗೆ ಆಡುವರು. 

’ಈ ಟೂರ್ನಿಯಲ್ಲಿ ಆಡಲು ನಾನೆಷ್ಟು ಉತ್ಸುಕನಾಗಿದ್ದೇನೆಂದು ಹೇಳಲು  ಪದಗಳೇ ನಿಲುಕುತ್ತಿಲ್ಲ.  ಚಾರ್ಲಿ ಜೊತೆ ಮೊದಲ ಅಧಿಕೃತ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದೇನೆ ‘ ಎಂದು ಟೈಗರ್ ಹೇಳಿದ್ದಾರೆ. 

’ಜೂನಿಯರ್ ಗಾಲ್ಫರ್ ಆಗಿ ಮಗ ಬೆಳೆಯುವುದನ್ನು ನೋಡುತ್ತಿದ್ದೇನೆ. ಅದೊಂದು ಅಮೋಘ ಅನುಭವ. ಚಾರ್ಲಿ ಜೊತೆಗೆ ಆಡುವುದು ಒಂದು ಅಮೋಘ ಅನುಭವವಾಗಲಿದೆ‘ ಎಂದಿದ್ದಾರೆ. 

ಡಿಸೆಂಬರ್ 19–20ರಂದು ಫ್ಲಾರಿಡಾದ ಒರ್ಲಾಂಡೊದ ರಿಟ್ಜ್‌ ಕಾರ್ಲಟನ್ ಗಾಲ್ಪ್‌ ಕ್ಲಬ್‌ನಲ್ಲಿ ಪಿಎನ್‌ಸಿ ಚಾಂಪಿಯನ್‌ಷಿಪ್ ನಡೆಯಲಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು