ಗುರುವಾರ , ಮೇ 19, 2022
23 °C

ಏಕದಿನ ಸರಣಿಗೆ ನಟರಾಜನ್; ವಿಜಯ್ ಹಜಾರೆ ಟ್ರೋಫಿ ಟೂರ್ನಿಯಿಂದ ವಿಶ್ರಾಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ (ಪಿಟಿಐ): ಮುಂದಿನ ತಿಂಗಳು ಇಂಗ್ಲೆಂಡ್ ಎದುರು ನಡೆಯಲಿರುವ ಸೀಮಿತ ಓವರ್‌ಗಳ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡಲು ಮಧ್ಯಮವೇಗಿ ಟಿ. ನಟರಾಜನ್ ಅವರಿಗೆ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಿಂದ ವಿಶ್ರಾಂತಿ ನೀಡಲಾಗಿದೆ.

ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ನಟರಾಜನ್ ಫಿಟ್ ಆಗಿ ಉಳಿಯಲು ದೇಶಿ ಏಕದಿನ ಟೂರ್ನಿಯಲ್ಲಿ ಆಡಿಸದಿರಲು ಬಿಸಿಸಿಐ ತಮಿಳುನಾಡು ಕ್ರಿಕೆಟ್ ಸಂಸ್ಥೆಗೆ ಮನವಿ ಮಾಡಿತ್ತು. ಇದನ್ನು ಪರಿಗಣಿಸಿರುವ ಸಂಸ್ಥೆಯು ತಮಿಳುನಾಡು  ತಂಡದಿಂದ ನಟರಾಜನ್ ಅವರನ್ನು ಬಿಡುಗಡೆ ಮಾಡಿದೆ.

’ನಟರಾಜನ್ ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದು ಸಂತಸದ ವಿಷಯ. ರಾಷ್ಟ್ರೀಯ ತಂಡದ ಮನವಿಯನ್ನು ಪರಿಗಣಿಸಿದ್ದೇವೆ‘ ಎಂದು ಟಿಎನ್‌ಸಿಎ ಕಾರ್ಯದರ್ಶಿ ಆರ್.ಎಸ್. ರಾಮಸ್ವಾಮಿ ತಿಳಿಸಿದ್ದಾರೆ.

ನಟರಾಜನ್ ಬದಲು ಆರ್.ಎಸ್. ಜಗನ್ನಾಥ್ ಶ್ರೀನಿವಾಸ್ ಅವರನ್ನು ರಾಜ್ಯ ತಂಡಕ್ಕೆ ಆಯ್ಕೆ ಮಾಡಲಾಗಿದೆ.  ತಂಡವು ಇದೇ 13ರಂದು ಇಂದೋರ್‌ಗೆ ತೆರಳಲಿದೆ. 20ರಿಂದ ಟೂರ್ನಿ ಆರಂಭವಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು