ಕೊಯಮತ್ತೂರು: ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೊನೆಯ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟಿರುವ ಬೌಲರ್ ಅಪಖ್ಯಾತಿಗೆ ಒಳಗಾಗಿದ್ದಾರೆ.
ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ನಡುವೆ ಮಂಗಳವಾರ ನಡೆದ ಪಂದ್ಯದಲ್ಲಿ ಇದು ನಡೆದಿದೆ.
ಸ್ಪಾರ್ಟನ್ಸ್ ತಂಡದ ನಾಯಕ ಅಭಿಷೇಕ್ ತನ್ವರ್ 20ನೇ ಓವರ್‌ನ ಕೊನೆಯ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಕೊನೆಯ ಎಸೆತದಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಅಪಖ್ಯಾತಿಗೆ ಒಳಗಾಗಿದ್ದಾರೆ.
ಅದೇ ಓವರ್‌ನ ಮೊದಲ ಐದು ಎಸೆತಗಳಲ್ಲಿ ಎಂಟು ರನ್ ಬಿಟ್ಟುಕೊಟ್ಟಿರುವ ತನ್ವರ್ ಅಂತಿಮವಾಗಿ ಒಟ್ಟು 26 ರನ್ ನೀಡಿದರು.
ತನ್ವರ್ ಅಂತಿಮ ಓವರ್‌ನ ಕೊನೆಯ ಎಸೆತ ಹೀಗಿತ್ತು:
NB, NB+6, NB+2, WD, 6