ಭಾನುವಾರ, ಏಪ್ರಿಲ್ 2, 2023
23 °C

ರಣಜಿ ಆಟಗಾರ ಸಿದ್ಧಾರ್ಥ್ ಶರ್ಮಾ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಹಿಮಾಚಲಪ್ರದೇಶ ತಂಡದ ಯುವವೇಗಿ ಸಿದ್ಧಾರ್ಥ್ ಶರ್ಮಾ ಅಲ್ಪಕಾಲದ ಅನಾರೋಗ್ಯದಿಂದಾಗಿ ಸಾವನ್ನಪ್ಪಿದರು. 

ವಡೋದರಾದ ಆಸ್ಪತ್ರೆಯಲ್ಲಿ ಅವರು ದಾಖಲಾಗಿದ್ದರು. 28 ವರ್ಷದ ಸಿದ್ಧಾರ್ಥ್ ಅವರು ಹೋದ ವರ್ಷ ವಿಜಯ್ ಹಜಾರೆ ಟ್ರೋಫಿ ಗೆದ್ದ ಹಿಮಾಚಲ ತಂಡದಲ್ಲಿ ಆಡಿದ್ದರು. ಅವರು ಆರು ಪ್ರಥಮ ದರ್ಜೆ, ಒಂದು ಟಿ20 ಮತ್ತು ಆರು ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದರು. ಒಟ್ಟು 33 ವಿಕೆಟ್‌ ಗಳಿಸಿದ್ದರು. 

‘ಗುರುವಾರ ರಾತ್ರಿ ಸಿದ್ಧಾರ್ಥ್ ನಿಧನರಾದರು. ಅವರಿಗೆ ಕಳೆದ ಕೆಲವು ದಿನಗಳಿಂದ ವೆಂಟಿಲೇಟರ್‌ ನೆರವಿನೊಂದಿಗೆ ಚಿಕಿತ್ಸೆ ನೀಡಲಾಗಿತ್ತು. ಈ  ಋತುವಿನಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಅವರು ನಮ್ಮ ತಂಡದಲ್ಲಿದ್ದರು. ಆ ಪಂದ್ಯಕ್ಕೂ ಮುನ್ನ ಅವರು ವಾಂತಿ ಮಾಡಲಾರಂಭಿಸಿದ್ದರು. ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಗಳೂ ಕಂಡುಬಂದವು. ಆದ್ದರಿಂದ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಎಚ್‌ಪಿಸಿಎ ಕಾರ್ಯದರ್ಶಿ ಅವಿನಾಶ್ ಪರಮಾರ್ ತಿಳಿಸಿದರು. 

ಸಿದ್ಧಾರ್ಥ್ ಅವರ ಪಾಲಕರು ಮತ್ತು ಅಣ್ಣ ವಿದೇಶದಲ್ಲಿ ನೆಲೆಸಿದ್ದಾರೆ.

‘ವಿಷಯ ತಿಳಿದು ಕೆನಡಾದಿಂದ ಅವರ ಅಣ್ಣ ಬಂದಿದ್ದಾರೆ. ಇಂದು ಸಿದ್ಧಾರ್ಥ್ ಅವರ ಅಂತಿಮ ಸಂಸ್ಕಾರ ನೆರವೇರಿಸಿದರು’ ಎಂದು ಪರಮಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು