ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಮ್ ಪೇನ್ ನಾಟೌಟ್ ತೀರ್ಪಿನ ಬಗ್ಗೆ ಟ್ವಿಟ್ಟರ್‌ನಲ್ಲಿ ಅಸಮಾಧಾನ ಸ್ಫೋಟ

Last Updated 26 ಡಿಸೆಂಬರ್ 2020, 10:59 IST
ಅಕ್ಷರ ಗಾತ್ರ

ಮೆಲ್ಬರ್ನ್ : ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ 2ನೇ ಟೆಸ್ಟ್ ಪಂದ್ಯದ ಮೊದಲ ದಿನಾದಾಟದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಅವರ ವಿವಾದಾತ್ಮಕ ನಾಟೌಟ್ ತೀರ್ಪಿನ ಕುರಿತಂತೆ ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

"ಬ್ಯಾಟ್ ಗೆರೆ ಮೇಲಿಲ್ಲ ಎಂದು ತೋರಿಸಲು ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ, ಆದ್ದರಿಂದ ಬ್ಯಾಟ್ ಗೆರೆ ಮೇಲೆ ಸ್ವಲ್ಪ ಹೊಂದುವಂತೆ ತೋರುತ್ತಿದೆ. ಹಾಗಾಗಿ, ನನ್ನ ತೀರ್ಪು ನಾಟೌಟ್ ”ಎಂದು ಮೂರನೇ ಅಂಪೈರ್ ಪಾಲ್ ವಿಲ್ಸನ್, ಟಿಮ್ ಪೈನ್ ನಾಟೌಟ್ ತೀರ್ಪು ನೀಡಿದ ಸಂದರ್ಭ ಹೇಳಿದ್ದರು.

ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಸೇರಿದಂತೆ ಹಲವರು ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂರನೇ ಅಂಪೈರ್ ತೀರ್ಪನ್ನು ನಾನು ಒಪ್ಪಿಕೊಳ್ಳುವುದಿಲ್ಲ, ಟಿಮ್ ಪೈನ್ ಬ್ಯಾಟಿನ ಯಾವುದೇ ಭಾಗವು ಗೆರೆಯೊಳಗೆ ಇರಲಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ರನೌಟ್ ತೀರ್ಪು ಪರಿಶೀಲನೆ ವೇಳೆ ಟಿಮ್ ಫೈನ್ ನಾಟೌಟ್ ಆಗಿ ಉಳಿದುಕೊಂಡಿದ್ದು ನಿಜಕ್ಕೂ ಅಚ್ಚರಿ ಎನಿಸುತ್ತಿದೆ. ಅವರ ಬ್ಯಾಟಿನ ಯಾವುದೇ ಭಾಗವು ಗೆರೆ ಮೇಲೆ ಇರಲಿಲ್ಲ. ನನ್ನ ಅಭಿಪ್ರಾಯದಲ್ಲಿ ಅವರು ಔಟ್ ಆಗಬೇಕಿತ್ತು,’ ಎಂದು ಶೇನ್ ವಾರ್ನ್ ಟ್ವೀಟ್ ಮಾಡಿದ್ದಾರೆ.

ಆಗಿದ್ದೇನು..?: 55ನೇ ಓವರಿನಲ್ಲಿ ಯುವ ಬ್ಯಾಟ್ ಮನ್ ಕೆಮರೂನ್ ಗ್ರೀನ್ ಮತ್ತು ಟಿಮ್ ಪೈನ್ ರನ್ ಓಡುವ ಸಂದರ್ಭ ಗೊಂದಲ ಉಂಟಾಗಿತ್ತು. ಆಸ್ಟ್ರೇಲಿಯಾ ನಾಯಕ ಕ್ರೀಸ್‌ಗೆ ತೆರಳಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭ ಫೀಲ್ಡರ್ ಉಮೇಶ್ ಯಾಧವ್ ಎಸೆದ ಚೆಂಡನ್ನು ತೆಗೆದುಕೊಂಡ ವಿಕೆಟ್ ಕೀಪರ್ ರಿಶಬ್ ಪಂತ್ ಬೇಲ್ಸ್ ಎಗರಿಸಿದ್ದರು.

ಅದರೆ, ಟಿಮ್ ಪೇನ್ ಔಟಾಗಿದ್ದಾರಾ ಎಂಬ ಬಗ್ಗೆ ಭಾರತೀಯರಿಗೆ ಖಚಿತತೆ ಇರಲಿಲ್ಲ. ಈ ಸಂದರ್ಭ ಥರ್ಡ್ ಅಂಪೈರ್ ಮೊರೆ ಹೋಗಲಾಯ್ತು. ರೀಪ್ಲೆ ನೋಡಿದಾಗ ಆಫ್ ಸೈಡ್ ಕ್ಯಾಮೆರಾದ ದೃಶ್ಯದಲ್ಲಿ ಟಿಮ್ ಪೇನ್ ಬ್ಯಾಟು ಕ್ರೀಸಿನ ಗೆರೆಯ ಹಿಂದೆ ಇದ್ದದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಬಳಿಕ ಥರ್ಡ್ ಅಂಪೈರ್ ಲೆಗ್ ಸೈಡ್ ದೃಶ್ಯ ತೋರಿಸುವಂತೆಯೂ ಕೇಳಿದರು. ಆದರೆ, ಅಲ್ಲಿಯೂ ಬ್ಯಾಟು ಗೆರೆ ಮೇಲಿತ್ತು ಎಂದು ಹೇಳುವ ಯಾವುದೆ ಪುರಾವೆ ಇರಲಿಲ್ಲ. ಆದರೆ, ಸಂಶಯದ ಆಧಾರದ ಮೇಲೆ ನಾಟೌಟ್ ಎಂದು ಥರ್ಡ್ ಅಂಪೈರ್ ತೀರ್ಪಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT