ಗುರುವಾರ , ಮಾರ್ಚ್ 23, 2023
30 °C

ಐಸಿಸಿ ಟಿ20: ಮೈದಾನದಲ್ಲಿ ಬಿದ್ದ ಇಬ್ಬರು ವಿಂಡೀಸ್‌ ಕ್ರಿಕೆಟ್‌ ಆಟಗಾರ್ತಿಯರು

ಪಿಟಿಐ Updated:

ಅಕ್ಷರ ಗಾತ್ರ : | |

Twitter

ಆಂಟಿಗುವಾ: ಪಾಕಿಸ್ತಾನ ವಿರುದ್ಧದ ಅಂತರರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ನ ಇಬ್ಬರು ಆಟಗಾರ್ತಿಯರು ಪ್ರತ್ಯೇಕ ಸಂದರ್ಭಗಳಲ್ಲಿ ಬಿದ್ದು, ಆಸ್ಪತ್ರೆಗೆ ದಾಖಲಾದ ಘಟನೆಗಳು ನಡೆದಿವೆ.

ಆಂಟಿಗುವಾದ ಕೂಲಿಡ್ಜ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ನ ಚಿನ್ನೆಲೆ ಹೆನ್ರಿ ಮತ್ತು ಚೆಡಿಯಾನ್‌ ನೇಷನ್‌ ಆಟದ ಮಧ್ಯೆ ಬಿದ್ದಿದ್ದಾರೆ. ವಿಂಡೀಸ್‌ ನೀಡಿದ್ದ 125 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ಬ್ಯಾಟಿಂಗ್‌ ನಡೆಸುತ್ತಿದ್ದಾಗ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಬಿದ್ದಿದ್ದಾರೆ. ಈ ಸಂದರ್ಭ ತಕ್ಷಣ ಇಬ್ಬರನ್ನು ಮೈದಾನದಿಂದ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ಪಂದ್ಯಕ್ಕೆ ಮಳೆಯ ಅಡಚಣೆ ಇದ್ದುದರಿಂದ ಡಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ ವೆಸ್ಟ್‌ ಇಂಡೀಸ್‌ 7 ರನ್‌ ಗಳಿಂದ ಜಯ ಗಳಿಸಿತು. 18 ಓವರ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದ ಪಾಕಿಸ್ತಾನ 103 ರನ್‌ ಗಳಿಸಲಷ್ಟೇ ಶಕ್ತವಾಯಿತು.

ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಹೆಚ್ಚು ಗಾಯಗೊಂಡಿಲ್ಲ, ಚೆನ್ನಾಗಿದ್ದಾರೆ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.