ಮಂಗಳವಾರ, ನವೆಂಬರ್ 19, 2019
28 °C

ಅಲ್ಟಿಮೇಟ್‌ ಕ್ರಿಕೆಟ್‌ನಲ್ಲಿ ಯುವಿ ಕಣಕ್ಕೆ

Published:
Updated:
Prajavani

ದುಬೈ: ಭಾರತದ ಹಿರಿಯ ಆಟಗಾರ ಯುವರಾಜ್‌ ಸಿಂಗ್‌ ಅವರು ಮುಂದಿನ ವರ್ಷ ಇಲ್ಲಿ ನಡೆಯುವ ಅಲ್ಟಿಮೇಟ್‌ ಕ್ರಿಕೆಟ್‌ ಚಾಲೆಂಜ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಫೆಬ್ರುವರಿ 18ರಿಂದ 23ರವರೆಗೆ ಒಳಾಂಗಣದಲ್ಲಿ ನಡೆಯುವ ಈ ಲೀಗ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ಮತ್ತು ಆ್ಯಂಡ್ರೆ ರಸೆಲ್‌, ಪಾಕಿಸ್ತಾನದ ಶಾಹಿದ್‌ ಅಫ್ರಿದಿ, ಇಂಗ್ಲೆಂಡ್‌ನ ಕೆವಿನ್‌ ಪೀಟರ್‌ಸನ್‌ ಸೇರಿದಂತೆ ಹಲವು ವಿಶ್ವ ಶ್ರೇಷ್ಠ ಆಟಗಾರರು ‍ಆಡಲಿದ್ದಾರೆ.

ಇಬ್ಬರು ಕ್ರಿಕೆಟಿಗರ ನಡುವೆ ತಲಾ ಐದು ಓವರ್‌ಗಳ ಪಂದ್ಯ ನಡೆಯಲಿದೆ. ಐದು ಬಾರಿ ಔಟಾದರೆ ಆಟಗಾರನ ಇನಿಂಗ್ಸ್‌ ಮುಗಿಯಲಿದೆ.

‘ಹೊಸ ಮಾದರಿಯ ಈ ಲೀಗ್‌ನಲ್ಲಿ ಆಡಲು ಉತ್ಸುಕನಾಗಿದ್ದೇನೆ. ಮೊದಲ ಆವೃತ್ತಿಯ ಯಶಸ್ಸಿನ ಮೇಲೆ ಲೀಗ್‌ನ ಭವಿಷ್ಯ ನಿರ್ಧರಿತವಾಗಲಿದೆ’ ಎಂದು ಯುವರಾಜ್‌ ಸಿಂಗ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)