ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದಲ್ಲಿ ಅಮೆರಿಕ ಟಿ20 ವಿಶ್ವಕಪ್‌ಗೆ ಆತಿಥ್ಯ: ಹಿಗ್ಗಿನ್ಸ್‌ ವಿಶ್ವಾಸ

Last Updated 10 ಜೂನ್ 2020, 2:56 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಸದ್ಯ ಕ್ರಿಕೆಟ್‌ ಕ್ರೀಡೆಯಲ್ಲಿ ಅಂಬೆಗಾಲಿಡುತ್ತಿರುವ ಅಮೆರಿಕವು ಭವಿಷ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ಆಯೋಜಿಸುವ ವಿಶ್ವಾಸವಿದೆ ಎಂದು ಯುಎಸ್‌ಎ ಕ್ರಿಕೆಟ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೇನ್ ಹಿಗ್ಗಿನ್ಸ್ ಹೇಳಿದ್ದಾರೆ.

1994ರಲ್ಲಿ ಅಮೆರಿಕವು ಫಿಫಾ ವಿಶ್ವಕಪ್ ಆಯೋಜಿಸಿತ್ತು. ಆ ಸಮಯದಲ್ಲಿ ಅಮೆರಿಕದಲ್ಲಿ ಫುಟ್‌ಬಾಲ್ ಕ್ರೀಡೆಯು ಬೇಸ್‌ಬಾಲ್‌, ಅಮೆರಿಕನ್ ಫುಟ್‌ಬಾಲ್‌ ಮತ್ತು ಬ್ಯಾಸ್ಕೆಟ್‌ಬಾಲ್‌ನಷ್ಟು ಜನಪ್ರಿಯವಾಗಿರಲಿಲ್ಲ. ಆದರೀ 35 ಲಕ್ಷ ಜನರು ಟೂರ್ನಿಯ ಪಂದ್ಯಗಳನ್ನು ಕ್ರೀಡಾಂಗಣಗಳಲ್ಲಿ ವೀಕ್ಷಿಸಿದ್ದರು.

‘ಅಮೆರಿಕದಲ್ಲಿ ಪಂದ್ಯಗಳನ್ನು ಆಡಿಸಿದರೆ ಎಲ್ಲ ಕ್ರೀಡಾಂಗಣಗಳು ಪ್ರೇಕ್ಷಕರಿಂದ ಭರ್ತಿಯಾಗುವುದು ಖಚಿತ. ಐಸಿಸಿಯು ಈ ಬಗ್ಗೆ ಹೆಜ್ಜೆ ಇಡಬೇಕು. ಅಮೆರಿಕದಲ್ಲಿ ಟಿ20 ವಿಶ್ವಕಪ್ ನಡೆಸಲು ಯೋಜನೆ ರೂಪಿಸಬೇಕು’ ಎಂದು ಹಿಗ್ಗಿನ್ಸ್‌ ಬಿಬಿಸಿ ವಾಹಿನಿಗೆ ಹೇಳಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನ ತಂಡಗಳು ಅಮೆರಿಕದಲ್ಲಿ ನಡೆಯುವ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಆಡಲು ಕಣಕ್ಕಿಳಿದರೆ ಪ್ರೇಕ್ಷಕರ ಉತ್ಸಾಹ ಹೇಗಿರುತ್ತದೆಯೆಂಬುದನ್ನು ಸುಮ್ಮನೆ ಊಹಿಸಿಕೊಳ್ಳಿ. ಅಮೆರಿಕದಲ್ಲಿರುವ ಉಭಯ ದೇಶಗಳ ಅಭಿಮಾನಿಗಳ ಸಂಖ್ಯೆಗೆ ತಕ್ಕಂತೆ ದೊಡ್ಡ ಕ್ರೀಡಾಂಗಣವನ್ನು ನಿರ್ಮಿಸುವುದು ಅಸಾಧ್ಯ. ದೇಶದಲ್ಲಿರುವ ಇಂತಹ ಕ್ರಿಕೆಟ್‌ಪ್ರೇಮಿಗಳಿಂದಾಗಿ ಅಲ್ಲಿ ಕ್ರೀಡೆಯು ಬೆಳೆಯುತ್ತದೆ’ ಎಂದು ವಿಶ್ಲೇಷಿಸಿದರು.

‘ನಮ್ಮ ದೇಶದಲ್ಲಿ ಕನಿಷ್ಠ ಆರು ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಿರ್ಮಿಸಬೇಕೆಂಬ ಯೋಜನೆ ಇದೆ. ಅದರಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಸಹಾಯಕವಾಗುತ್ತದೆ. ಅಲ್ಲಿಯ ಇನ್ನುಳಿದ ಕ್ರೀಡೆಗಳೂ ಜನಪ್ರಿಯವಾಗಿವೆ. ದೊಡ್ಡ ಟೂರ್ನಿಗಳಿಗೆ ಉತ್ತಮ ಮಾರುಕಟ್ಟೆ ಇದೆ. ಅಮೆರಿಕದಲ್ಲಿ ಅಸಾಂಪ್ರದಾಯಿಕವಾಗಿರುವ ಕ್ರಿಕೆಟ್‌ಗೂ ಉತ್ತಮ ಮಾರುಕಟ್ಟೆ ಇದೆ’ ಎಂದು ಹೇಳಿದರು.

‘ಮುಂದಿನ ಹತ್ತು ವರ್ಷಗಳಲ್ಲಿ ಐಸಿಸಿಯ ಪೂರ್ಣಾವಧಿ ಸದಸ್ಯತ್ವವನ್ನು ಗಳಿಸುವುದು ನಮ್ಮ ಗುರಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT