ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ: 10 ರನ್‌ ತೆತ್ತು, 8 ವಿಕೆಟ್ ಕಿತ್ತ ಶಾಬಾಜ್ ವಿಶ್ವದಾಖಲೆ

Last Updated 20 ಸೆಪ್ಟೆಂಬರ್ 2018, 19:21 IST
ಅಕ್ಷರ ಗಾತ್ರ

ಚೆನ್ನೈ: ಜಾರ್ಖಂಡ್ ತಂಡದ ಎಡಗೈ ಸ್ಪಿನ್ನರ್ ಶಾಬಾಜ್ ನದೀಂ ಗುರುವಾರ ವಿಶ್ವದಾಖಲೆ ನಿರ್ಮಿಸಿದರು.

ಇಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಅವರು ರಾಜಸ್ಥಾನ್ ವಿರುದ್ಧ 10 ರನ್‌ಗಳನ್ನು ನೀಡಿ 8 ವಿಕೆಟ್‌ಗಳನ್ನು ಕಬಳಿಸಿದರು. ಇದು ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ದಾಖಲಾದ ಶ್ರೇಷ್ಠ ಸಾಧನೆಯಾಗಿದೆ.

ಈ ಹಿಂದೆ ದೆಹಲಿಯ ರಾಹುಲ್ ಸಂಘ್ವಿ ಅವರು ಹಿಮಾಚಲಪ್ರದೇಶದ ವಿರುದ್ಧ 15ಕ್ಕೆ8 ವಿಕೆಟ್ ಗಳಿಸಿದ್ದರು. ಚಮಿಂದಾ ವಾಸ್ ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 19ಕ್ಕೆ8 ವಿಕೆಟ್‌ಗಳನ್ನು ಪಡೆದಿದ್ದರು. ಅವರನ್ನು ಮೀರಿಸಿರುವ ಶಾದಾಬ್ ಮೊದಲ ಸ್ಥಾನಕ್ಕೇರಿದ್ದಾರೆ. ಅವರ ಕರಾರುವಾಕ್ ದಾಳಿಯಿಂದಾಗಿ ರಾಜಸ್ಥಾನ ತಂಡವು ಕೇವಲ 73 ರನ್‌ಗಳಿಗೆ ಆಲೌಟ್ ಆಯಿತು. ಅನುಕೂಲ್ ರಾಯ್ (23ಕ್ಕೆ2) ಅವರು ಎರಡು ವಿಕೆಟ್‌ಗಳನ್ನು ಪಡೆದರು.

ಅದಕ್ಕುತ್ತರವಾಗಿ ಜಾರ್ಖಂಡ್ ತಂಡವು 14 ಓವರ್‌ಗಳಲ್ಲಿ3 ವಿಕೆಟ್‌ಗಳಿಗೆ 76 ರನ್‌ ಗಳಿಸಿತು. 7 ವಿಕೆಟ್‌ಗಳಿಂದ ಜಯಿಸಿತು.

*

ಅಗ್ರ ಐವರು ಬೌಲರ್‌ಗಳ ಸಾಧನೆ

ಆಟಗಾರ; ವಿಕೆಟ್; ತಂಡ; ಎದುರಾಳಿ

ಶಾಬಾಜ್ ನದೀಂ;10ಕ್ಕೆ8;ಜಾರ್ಖಂಡ್; ರಾಜಸ್ಥಾನ್

ರಾಹುಲ್ ಸಂಘ್ವಿ;15ಕ್ಕೆ8;ದೆಹಲಿ; ಹಿಮಾಚಲಪ್ರದೇಶ

ಚಮಿಂದಾ ವಾಸ್;19ಕ್ಕೆ8;ಶ್ರೀಲಂಕಾ;ಜಿಂಬಾಬ್ವೆ

ತಾರಕ್ ಕೋಟೇಶ್ವರ್;20ಕ್ಕೆ8;ನಾನ್‌ದೆಸ್‌ಪ್ಟಸ್;ರಾಗಂ ಸಿಸಿ

ಮೈಕೆಲ್ ಹೋಲ್ಡಿಂಗ್; 21ಕ್ಕೆ8;ಡರ್ಬಿಶೈರ್;ಸಸೆಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT